ಸ್ಥಳೀಯ ಸುದ್ದಿಗಳು

ಜಿಪಂ ಆವರಣದಲ್ಲಿ ಶುಭಾರಂಭಗೊಂಡ ಎಂಎಲ್ ಸಿ ಡಿ.ಎಸ್.ಅರುಣ್ ಅವರ ಕಚೇರಿ

ಸುದ್ದಿಲೈವ್.ಕಾಂ/ಶಿವಮೊಗ್ಗ

ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಎಂಎಲ್ ಸಿ ಆಗಿ ಆಯ್ಕೆಯಾಗಿರುವ ಡಿಎಸ್ ಅರುಣ್ ಕಚೇರಿಯನ್ನ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.

ಎಂ ಎಲ್ ಸಿ ಆಗಿ 2½ ತಿಂಗಳ ನಂತರ ಡಿ.ಎಸ್ ಅರುಣ್ ತಮ್ಮ ಕಚೇರಿಯನ್ನ ಉದ್ಘಾಟಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ನ ಎಂ ಎಲ್ ಸಿ ಆರ್ ಪ್ರಸನ್ನ ಕುಮಾರ್ ಅವರ ಕಚೇರಿಯಲ್ಲಿಯೇ ಅರುಣ್ ಕಚೇರಿಯನ್ನ ಆರಂಭಿಸಿದ್ದಾರೆ.

ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಕೆ.ಬಿ.ಅಶೋಕ್ ನಾಯ್ಕ್ ನೂತನ ಕಚೇರಿ ಉದ್ಘಾಟಿಸಿದ ಅರುಣ್ ಗೆ ಆಸೀರ್ವದಿಸಿ ಶುಭಾಶಯ‌ ಕೋರಿದರು. ನಂತರ ಸಚಿವರು ಮತ್ತು ಶಾಸಕರ‌ ಸಮ್ಮುಖದಲ್ಲಿ ಗ್ರಾಮ ಪಂಚಾಯಿತಿಯ ವೀಡಿಯೋ ಕಾನ್ಫೆರೆನ್ಸ್ ಮೂಲಕ ಅರುಣ್ ಗ್ರಾಪಂ ಸದಸ್ಯರನ್ನ ಮಾತನಾಡಿಸಿದರು.

ನಂತರ ಮಾತನಾಡಿದ ಡಿ.ಎಸ್. ಅರುಣ್ ನಮ್ಮ ಕಚೇರಿ 24×7 ರೀತಿಯಲ್ಲಿ ಕೆಲಸ ಮಾಡಲಿದೆ. ಸಾರ್ವಜನಿಕರು ಮತ್ತು ಗ್ರಾಮಪಂಚಾಯಿತಿಯ ಸದಸ್ಯರು ಬಂದು ಮಾಹಿತಿಗಳನ್ನ ಪಡೆಯಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅರುಣ್ ತಂದೆ ಹಾಗೂ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಉಪಸ್ಥಿತರಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button