ಅವೈಜ್ಞಾನಿಕ ಕುಡಿಯುವ ನೀರಿನ ಬಿಲ್ ಕಟ್ಟದಂತೆ ಈಶ್ವರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ

ಸುದ್ದಿಲೈವ್.ಕಾಂ/ಶಿವಮೊಗ್ಗ
24×7 ಸರಬರಾಜು ಮಾಡಲಾಗುತ್ತಿರುವ ಕುಡಿಯುವ ನೀರಿನ ಸರಬರಾಜಿಗೆ ನೀಡಲಾಗುತ್ತಿರುವ ಅವೈಜ್ಞಾನಿಕ ಬಿಲ್ ಗೆ ಬ್ರೇಕ್ ಬಿದ್ದಿದೆ. ಮೂರು ಬಡಾವಣೆಯಲ್ಲಿ ನೀಡಲಾಗುತ್ತಿರುವ ಅವೈಜ್ಞಾನಿಕ ಬಿಲ್ ನ ಹಣವನ್ನ ಕಟ್ಟದಂತೆ ಸಚಿವ ಈಶ್ವರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಳೆ ಬಿಲ್ ರೀತಿಯಲ್ಲಿಯೇ ಕಟ್ಟಲಾಗುತ್ತಿರುವ 120 ರೂ. ಬದಲು ಪ್ರತಿ ತಿಂಗಳು ಪ್ರತಿ ಮನೆಗೆ 175 ರೂ. ಕುಡಿಯುವ ನೀರಿನ ಹಣ ಸಂಗ್ರಹ ಮಾಡಬೇಕು. ಇಬ್ಬರು ಕೆಮಿಸ್ಟ್ ನ್ನ ನೇಮಿಸಿಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು.
ಹೊರಗುತ್ತಿಗೆ ಮೇಲೆ ಕೆಮಿಸ್ಟ್ ನ್ನ ತೆಗೆದುಕೊಳ್ಳುವುದು, ಪಾಲಿಕೆಯಿಂದ ಸಂಬಳ ನೀಡುವುದು ಹುದ್ದೆಗೆ ತೆಗೆದುಕೊಳ್ಳಲು ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಡೆಸಬೇಕು ಎಂದು ತೀರ್ಮಾನಿಸಲಾಯಿತು.
ಈಗಾಗಲೇ 61 ಸಾವಿರ ಮನೆಗಳಿಗೆ 24×7 ಕುಡಿಯುವ ನೀರಿನ ಸಂಪರ್ಕ ನೀಡಬೇಕಿತ್ತು. ಅದರ ಬದಲು ಈಗ 18 ಸಾವಿರ ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಈ ಯೋಜನೆ 2018 ರಿಂದ ಚಾಲನೆಯಲ್ಲಿದೆ. ಮೂರು ವರ್ಷದಲ್ಲಿ ಮುಗಿಯ ಬೇಕಿತ್ತು 4 ವರ್ಷ ಕಳೆದರೂ ನಡೆಯುತ್ತಿದೆ. ಹಾಗಾಗಿ ಪ್ರತಿ ಮನೆಗೂ ನೀರಿನ ಸಂಪರ್ಕ ನೀಡಿದ ನಂತರ ಬಿಲ್ ನೀಡಬೇಕು ಎಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ನಾಗರೀಕ ಹಿತರಕ್ಷಣ ವೇದಿಕೆ ವಸಂತ್ ಕುಮಾರ್, ಸತೀಶ್ ಶೆಟ್ಟಿ, ಮೇಯರ್ ಸುನೀತಾಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಕೆಯುಡಬ್ಲು ಅಧಿಕಾರಿ ರಮೇಶ್, ಗುತ್ತಿಗೆದಾರ, ಎಇಇ ಸಿದ್ದಣ್ಣ ಮತ್ತು ನಾಗರೀಕರು ಉಪಸ್ಥಿತರಿದ್ದರು.
ಪರಿಹಾರ ಸಮೇತ ಬನ್ನಿ
ಮನೆಗಳಿಗೆ ಕುಡಿಯುವ ನೀರಿನ ಹೊಸ ಸಂಪರ್ಕ ನೀಡುತ್ತಿರುವುದರ ಬಗ್ಗೆ ಕೆಲ ಸಮಸ್ಯೆಗಳನ್ನ ನಾಗರೀಕ ಹಿತರಕ್ಷಣೆ ವೇದಿಕೆ ಸಭೆಯಲ್ಲಿ ಪ್ರಸ್ಥಾಪಿಸಿತು. ಮನೆಗಳಿಗೆ ಜಿಎ ಪೈಪ್ ಅಳವಡಿಕೆ, ನೀರಿನ ಟ್ಯಾಪ್, ಮೀಟರ್ ಅಳವಡಿಕೆಯು ಅವೈಜ್ಞಾನವಾಗಿದ್ದು ಈ ಬಗ್ಗೆ ತಪಾಸಣೆಗೆ ವೇದಿಜೆ ಸದಸ್ಯರ ಜೊತೆ ತೆರಳಿ ಪರಿಶೀಲನೆ ನಡೆಸಿ ನಂತರ ಮುಂದಿನ ಸಭೆಗೆ ಬರುವಂತೆ ಮಾಜಿ ಸಚಿವ ಈಶ್ವರಪ್ಪ ಕೆಯುಡಬ್ಲುಜೆ ಅಧಿಕಾರಿಗಳಿಗೆ ಸೂಚಿಸಿದರು.
