ಡಿಜಿಟಲ್ ‘ರಾಬರಿ’

ಸುದ್ದಿಲೈವ್. ಕಾಂ/ಶಿವಮೊಗ್ಗ
ನಗರದ ಎಎ ಕಾಲೋನಿ ಬಳಿ ಯುವಕನನ್ನ ಅಡ್ಡಕಟ್ಟಿ ಚಿನ್ನದ ಸರ ಕಸಿದುಕೊಂಡು ಪೋನ್ ಪೇ ಮೂಲಕ ಹಣ ರವಾನಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಎಎ ವೃತ್ತದ ಬಳಿ ಮೈಸ್ನಹಳ್ಳಿಯ ವಿಜಯ್ ಎಂಬಾತ ಯುವಕ ನಿನ್ನೆ ಕೆಲಸ ಮುಗಿಸಿಕೊಂಡು ಊರಿಗೆ ಹೋಗುವ ಸಂದರ್ಭದಲ್ಲಿ ನಾಲ್ವರು ಅಪರಿಚಿತರು ಅಡ್ಡಕಟ್ಟಿ ಬ್ಲಡ್ ಬ್ಯಾಂಕ್ ನ ಪೊದೆ ಕಡೆ ಕರೆದುಕೊಂಡು ಹೋಗಿದ್ದಾರೆ.
ಹಣ ಕೊಡು ಎಂದು ಕೊರಳಲ್ಲಿ ಇದ್ದ ಚಿನ್ನದ ಸರ ಕಿತ್ತುಕೊಂಡಿದ್ದಾರೆ. ಹಣವಿಲ್ಲ ಬಿಟ್ಟುಬಿಡಿ ಎಂದು ವಿಜಯ್ ಗೋಗರೆದಿದ್ದಾನೆ. ಆದರೆ ಇಷ್ಟಕ್ಕೆ ಬಿಡದ ಕಿರಾತಕರು ಡಿಜಿಟಲ್ ಮೂಲಕ ರಾಬರಿ ಮಾಡಿದ್ದಾರೆ.
ಸುಮಾರು 3 ಸಾವಿರ ರೂ. ಹಣವನ್ನ ಫೋನ್ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಈ ಘಟನೆ ನಿನ್ನೆ ರಾತ್ರಿ 8-30 ರ ಸಮಯದಲ್ಲಿ ನಡೆದಿದೆ. ನಂತರ ಚಿನ್ಬದ ಸರ ವಾಪಾಸ್ ನೀಡಿದ್ದಾರೆ.
ಈ ಘಟನೆ ನಡೆದ ತಕ್ಷಣ ಯುವ ಕಾಂಗ್ರೆಸ್ನ ಗಿರಿಗೆ ವಿಚಾರ ತಿಳಿಸಿರುವ ವಿಜಯ್ ತಮ್ಮ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಗ್ರಾಮಸ್ಥರು ಯುವಕನ ಸಹಾಯಕ್ಕೆ ಬಂದರು ಯಾರು ಪತ್ತೆಯಾಗಿಲ್ಲ. ನಂತರ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
