ಕ್ರೈಂ

ಮಗಳಿಗೆ ಕಿರುಕುಳ ನೀಡಿದ ಅಳಿಯನ ವಿರುದ್ಧ ದೂರು!

ಸುದ್ದಿಲೈವ್. ಕಾಂ/ಶಿವಮೊಗ್ಗ

ಮಗಳನ್ನ ಕಾಟೀಕೆರೆ ರುದ್ರೇಶ್ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು, ಸಂಸಾರ ನಡೆಸದ ಅಳಿಯ ಮಗಳಿಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ತಂದೆ ಅಳಿಯನ ಕುಟುಂಬದ 18 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಅಳಿಯ ರುದ್ರೇಶ್, ಅಜೇಯ, ಮೈಲಾರಪ್ಪ, ಕೆಂಚಮ್ಮ, ಗೀತಮ್ಮ,ಬಸಪ್ಪ, ಸುಧಾ, ಶರತ್, ರೋಹಿತ್, ನಾಗರತ್ನ, ಅಶ್ವಥ್, ಅಶ್ವಿನಿ, ದಾನಭೋವಿ, ರಂಗಪ್ಪ, ಉಮಾಪತಿ, ಗಿರೀಶ, ಪುಟ್ಟಿ ಸಂತೋಷ್ ಎಂಬ 18 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು,

ಇವರೆಲ್ಲರೂ ಮಗಳು‌ ನಿಖಿತಾರಿಗೆ ಆಕೆಯ ಬಟ್ಟೆ, ಶೈಕ್ಷಣಿಕ ದಾಖಲೆಗಳು, ರೇಷನ್ ಕಾರ್ಡ್ ಮೊಮ್ಮಕಳ ದಾಖಲೆಗಳು, ಬೆಲೆಬಾಳುವ ರೇಷ್ಮೇ ಸೀರೆ, ಇತರೆ ಬಟ್ಟೆಗಳನ್ನ ನೀಡದೆ ಸತಾಯಿಸಿದ್ದಾರೆ ಎಂದು ತಂದೆ ಲಿಂಗೇಶ್ ಎಸ್ ಎನ್ ದೂರಿನಲ್ಲಿ ದಾಖಲಿಸಿದ್ದಾರೆ.

ಸಂಸಾರ ನಡೆಸದ ಅಳಿಯ ರುದ್ರೇಶ್ ಮಗಳಿಗೆ ಕಾಟ ಕೊಡಲಾರಂಭಿಸಿದ್ದಕ್ಕೆ ತಂದೆ ಲಿಂಗೇಶ್ ಮಗಖನ್ನ ಮತ್ತು ಮೊಮ್ಮಗಳನ್ನ ತಮ್ಮ ಮನೆಯಾದ ಶಿವಮೊಗ್ಗದ ವಿನೋಬನಗರಕ್ಕೆ ಕರೆದುಕೊಂಡು ಬಂದಿದ್ದಾರೆ.

ಮಗಳನ್ನ ಕರೆದುಕೊಂಡು ಬರುತ್ತಿದ್ದಂತೆ ಮಗಳ ಉಪಯುಕ್ತ ದಾಖಲೆ, ಸೀರೆ, ಬಟ್ಟೆ ಗಳನ್ನ ಹಾಳು ಮಾಡಿರುವುದಾಗಿ ಆರೋಪಿಸಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button