ಅವೈಜ್ಞಾನಿಕ ಆಸ್ತಿ ತೆರಿಗೆ ವಿರುದ್ಧ ನಾಗರೀಕ ಹಿತರಕ್ಷಣ ವೇದಿಕೆಯ ಸಭೆ-ಜನಜಾಗೃತಿಗೆ ಹೆಚ್ಚು ಒತ್ತು

ಸುದ್ದಿಲೈವ್. ಕಾಂ/ಶಿವಮೊಗ್ಗ
ಆಸ್ತಿ ತೆರಿಗೆ ವಿಚಾರದಲ್ಲಿ ನಾಗರೀಕರ ಹಿತರಕ್ಷಣ ವೇದಿಕೆ ಮುಂದಿನ ಹೋರಾಟದ ಬಗ್ಗೆ ಇಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಭಾಂಗಣದಲ್ಲಿ ಸಭೆ ಸೇರಿ ಕೋರ್ಟ್ ಗೆ ಜನ ದಾವೆ ಹೂಡಲು ಮುಂಬರುವಂತೆ ಕರೆ ಕೊಟ್ಟಿದೆ.
ಹೈಕೋರ್ಟ್ ಅರ್ಜಿ ನೀಡಿದ್ದರ ಹಿನ್ನಲೆಯಲ್ಲಿ ಮಾನ್ಯ ನ್ಯಾಯಾಲಯ ಅರ್ಜಿಯನ್ನ ಪುರಸ್ಕರಿಸಿದ್ದು, ರಾಜ್ಯ ಸರ್ಕಾರ, ಪಾಲಿಕೆ ಮತ್ತು ಡಿಎಂಎ ರಿಗೆ ನೋಟೀಸ್ ನೀಡಿದೆ. ಈ ಹಿನ್ನಲೆಯಲ್ಲಿ ನಾಗರೀಕರ ಹಿತರಕ್ಷಣ ವೇದಿಕೆ ಸಭೆ ನಡೆಸಿತ್ತು.
ಒಂದೊಂದು ಪ್ರದೇಶದಲ್ಲಿ ಒಂದೊಂದು ತೆರಿಗೆಯನ್ನ ಪಾಲಿಕೆ ನಿಗದಿ ಪಡಿಸಿ ಆಸ್ತಿ ತೆರಿಗೆ ನಿಗದಿಪಡಿಸಿದೆ. ಆಸ್ತಿ ತೆರಿಗೆಯನ್ನ ಅವೈಜ್ಞಾನಿಕವಾಗಿ ನಿಗದಿ ಪಡಿಸಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಹಾಗಾಗಿ ವಸಂತ್ ಕುಮಾರ್ ನೇತೃತ್ವದಲ್ಲಿ ವೇದಿಕೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದಕ್ಕೂ ಮೊದಲು ಪಾಲಿಕೆಯ ಆಸ್ತಿ ತೆರಿಗೆ ವಿರುದ್ಧ 35 ವಾರ್ಡ್ ನಲ್ಲಿ ಸಭೆ ನಡೆಸಿ ಜಾಗೃತಿ ಮೂಡಿಸಲಾಗಿತ್ತು. ವೇದಿಕೆ ಹೂಡಿರುವ ದಾವೆಗೆ ನ್ಯಾಯಾಲಯ ಸ್ಪಂಧಿಸಿ ನೋಟೀಸ್ ನೀಡಿದೆ. ಈ ಹಿನ್ನಲೆಯಲ್ಲಿ ಜನ ಜಾಗೃತಿ ಮೂಡಿಸಲು ವೇದಿಕೆ ಸಭೆ ನಡೆಸಿ ಹೆಚ್ಚಿನ ಜನರನ್ನ ಈ ಹೋರಾಟದಲ್ಲಿ ಸೇರಿಸಿಕೊಳ್ಳುವುದು.
ಯಾರು ತೆರಿಗೆ ಕಟ್ಟದೆ ಹೋರಾಟಕ್ಕೆ ಸಿದ್ದರಿದ್ದರೋ ಅವರನ್ನ ಸೇರಿಸಿಕೊಂಡು ಹೆಚ್ಚು ಹೆಚ್ಚು ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಮಾಡುವುದು ಮತ್ತು ಜನರನ್ನ ಈ ಹೋರಾಟದಲ್ಲಿ ಪಾಲುದಾರಿಕೆ ಮಾಡುವುದು ಸಭೆಯಲ್ಲಿ ತೀರ್ಮಾನಿಸಲಾಯಿತು.
