ಇನ್ನೂ ನಿಗಿ ನಿಗಿ ಎನ್ನುತ್ತಿರುವ ಸೂಳೆಬೈಲು!


ಸುದ್ದಿಲೈವ್.ಕಾಂ/ಶಿವಮೊಗ್ಗ
ಕೆಲ ದುರುಳರ ಮತ್ತು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸೂಳೆಬೈಲು ಇನ್ನೂ ನಿಗಿ ನಿಗಿ ಎನ್ನುತ್ತಿದೆ. ಘಟನೆಗೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿಯೇ ಜನ ಯೋಚಿಸುತ್ತಿರುವುದಾಗಿ ತಿಳಿದುಬರುತ್ತಿದೆ.
ಸೂಳೆಬೈಲಿನಲ್ಲಿ ಕಾರೊಂದರ ಮೇಲೆ ದಾಳಿ ನಡೆಸಿ ಕಾರಂ ಜಕಂಗೊಳಿಸಿರುವ ಮತ್ತು ಘೋಷಣೆ ಕೂಗಿರುವ ಘಟನೆ ಇನ್ನೂ ಮರೆಯುವ ಮೊದಲೇ ಮತ್ತೊಂದು ಕಲ್ಲುತೂರಾಟ ನಡೆದಿದೆ. ಒಟ್ಟಿನಲ್ಲಿ ಎರಡೂ ದರ್ಮಿಯದವರು ಬ್ರಾತೃತ್ವ ಮರೆತು ಬೀದಿಗೆ ಇಳಿದಿರುವುದು ಸ್ಪಷ್ಟವಾಗಿದೆ.
ಮೊಹ್ಮದ್ ಇರ್ಫಾನ್ ಎಂಬುವರು ತಮ್ಮ ವ್ಯಾಪಾರ ಮುಗಿಸಿ ಸೂಳೆಬೈಲಿನ ತೀರ್ಥಪ್ಪನ ಕ್ಯಾಂಪ್ ನಲ್ಲಿರುವ ಮನೆಗೆ ಬಂದು ತಮ್ಮ ಕೆಎ 22ಪಿ1602, ಐ10 ಕಾರನ್ನ ಮನೆ ಮುಂದೆ ನಿಲ್ಲಿಸಿ ಮನೆ ಒಳಗೆ ಹೋಗಿದ್ದಾರೆ.
ಈ ವೇಳೆ ಕೆಎ14 ಇಎಂ 2147 ಕ್ರಮ ಸಂಖ್ಯೆಯ ಸಿಟಿ100 ಬೈಕ್ ನಲ್ಲಿ ಇಬ್ಬರು ಕಲ್ಲು ತೂರಿಕೊಂಡು ಬಂದಿದ್ದಾರೆ. ಈ ವೇಳೆ ಇರ್ಫಾನ್ ಅವರ ಕಾರು ಇವರ ಕಲ್ಲು ತೂರಾಟದಲ್ಲಿ ಜಕಂಗೊಂಡಿದ್ದಾರೆ. ಇರ್ಫಾನ್ ಅವರ ಅಕ್ಕಪಕ್ಕದ ಮನೆಯವರಾದ ಅಬೀಬ್, ಹಬೀಬ್, ಜಬೀರವರು ಮತ್ತೊಂದ ಬೈಕ್ ನಲ್ಲಿ ಬಿಂಬಾಲಿಸಿ ಕಲ್ಲು ತೂರಿಕೊಂಡು ಹೋದವರ ದ್ವಿಚಕ್ರವಾಹನದ ಫೊಟೊ ಕ್ಲಿಕ್ಕಿಸಿದ್ದಾರೆ.
ನೆರೆಹೊರೆಯ ಸಹಾಯದಿಂದ ಕಿಡಿಗೇಡಿಗಳಲ್ಲಿ ಒಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಆತನನ್ನ ತೇಜಸ್ ಎಂದು ಗುರುತಿಸಲಾಗಿದೆ.
ಈ ಕುರಿತು ಸುದ್ದಿಲೈವ್ ನೊಂದಿಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್, ಬಾರೊಂದರಲ್ಲಿ ಮದಗಯ ಸೇವಿಸಿ ಕುಳಿತ್ತಿದ್ದ ಶಿವು ಮತ್ತು ತೇಜಸ್ ಎಂಬ ಇಬ್ಬರು ಯುವಕರು ಅನ್ನಕೋಮಿನ ಮನೆಗಳ ಮೇಲೆ ಕಲ್ಲು ತೂರಲು ತೀರ್ಮಾನಿಸಿದ್ದಾರೆ.
ಹಾಗೆ ಕಲ್ಲಗಳನ್ನ ಸಂಗ್ರಹಿಸಿ ಬೀದಿಯಲ್ಲಿ ಕಲ್ಲುಗಳನ್ನ ತೂರಲು ಅರಂಭಿಸಿದ್ದಾರೆ ಈ ವೇಳೆ ಇರ್ಫಾನ್ ಅವರ ಕಾರಿಗೆ ಕಲ್ಲು ತಾಗಿದೆ ಎಂದು ತಿಳಿಸಿದರು. ಪ್ರಕರಣ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
