ಗೃಹಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ಬರುವಷ್ಟರಲ್ಲಿ ಕೈಚಳಕ ತೋರಿಸಿದ ಖದೀಮರು

ಸುದ್ದಿಲೈವ್. ಕಾಂ/ತೀರ್ಥಹಳ್ಳಿ
ಮನೆಗೆ ಕನ್ನ ಹಾಕಿರುವ ಕಳ್ಳರು ಭರ್ಜರಿಯಾಗಿಯೇ ಕೈಚಳಕ ತೋರಿದ್ದಾರೆ. ಗೃಹಪ್ರವೇಶಕ್ಕೆ ಹೋಗಿದ್ದ ವೇಳೆಯಲ್ಲಿ ಖದೀಮರು ಮನೆಯಲ್ಲಿದ್ದ ಆಭರಣಗಳನ್ನ ದೋಚಿಕೊಂಡು ಹೋಗಿದ್ದಾರೆ
ತೀರ್ಥಹಳ್ಳಿ ತಾಲೂಕಿನ ಹೊನ್ನೇಕಟ್ಟೆ ಗ್ರಾಮದಲ್ಲಿ ಮಂಜುನಾಥ್ ಎಂಬುವರು ಪತ್ನಿ ಜೊತೆ ಗೃಹಪ್ರವೇಶಕ್ಕೆ ಹೋಗಿ ಬರುವುದರೊಳಗೆ 250 ಗ್ರಾಂ ಬೆಳ್ಳಿ, 7 ಸಾವಿರ ನಗದು, 90 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದೆ.
ಮಧ್ಯಾಹ್ನ 12 ಗಂಟೆಯ ವೇಳೆಗೆ ಗೃಹಪ್ರವೇಶಕ್ಕೆ ಹೋದ ಮಂಜುನಾಥ್ ಮಧ್ಯಾಹ್ನ 3 ಗಂಟೆಯ ವೇಳೆಗೆ ವಾಪಾಸಾಗಿದ್ದಾರೆ. ಮನೆಗೆ ಬಂದ ಮಂಜುನಾಥ್ ಗೆ ಶಾಕ್ ಆಗಿದೆಮನೆಯಮುಂಬಾಗಿಲಿಗೆ ಹಾಕಿದ ಚಿಲಕ ಮುರಿದುಹೋಗಿತ್ತು.
ಒಳಗೆ ಹೋಗಿ ನೋಡಿದಾಗ ಹಿಂಬಾಗಿಲು ತೆರೆದಿತ್ತು. ಕೋಣೆಯಲ್ಲಿದ್ದ ಬಟ್ಟೆ ಮತ್ತು ವಸ್ತುಗಳು ಚಿಲ್ಲಾಪಿಲ್ಲಿಯಾಗಿದೆ. ಬೀರುವಿನಲ್ಲಿದ್ದ 8 ಗ್ರಾಂನ ಎರಡು ಚಿನ್ನದ ಸರ, ಲಕ್ಷ್ಮೀ ಪೆಂಡೆಂಟ್, ಓಲೆ, ಮೂರು ಉಂಗುರ ಸೇರಿ ಒಟ್ಟು 3 ಲಕ್ಷದ 97 ಸಾವಿರದ ಚಿನ್ನಾಭರಣ,
7 ಸಾವಿರ ನಗದು ಮತ್ತು 250 ಗ್ರಾಂ ಬೆಳ್ಳಿಯನ್ನ ಕದ್ದರುವುದು ತಿಳಿದು ಬರುತ್ತಿದೆ. ಪ್ರಕರಣವನ್ನ ಮಂಜುನಾಥ್ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.
