ಕ್ರೈಂ

ಗಂಡನ ವಾಹನದ ಮಾಲಿಕತ್ವ ವಿಚಾರದಲ್ಲಿ ಗಲಾಟೆ

ಸುದ್ದಿಲೈವ್. ಕಾಂ/ಶಿವಮೊಗ್ಗ

ಗಂಡನನ್ನ ಕಳೆದುಕೊಂಡ 26 ವರ್ಷದ ಮಹಿಳೆಗೆ ಗಂಡನ ಮನೆಯ ಕಡೆಯವರು ವಾಹನದ ಮಾಲಿಕತ್ವ ಪಡೆಯಲು ಕಿರುಕುಳ ನೀಡುತ್ತಿರುವುದಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

2017 ರಲ್ಲಿ ಯಲವಟ್ಟಿಯ ಶ್ರೀದೇವಿ ಎಂಬುವರು ಹಾರನಹಳ್ಳಿ ಗ್ರಾಮದ ಗಣೇಶ್ ಎಂಬುವರೊಂದಿಗೆ ಮದುವೆಯಾಗಿದ್ದರು. ಆದರೆ 2021 ರಲ್ಲಿ ಪತಿ ಗಣೇಶ್ ಸಾವನ್ನಪ್ಪಿರುತ್ತಾರೆ. ಅವರು ಸಾಯುವುದಕ್ಕಿಂತ ಮೊದಲು ಮಾರುತಿ ಈಕೋ ಮತ್ತು ಒಂದು ಯಮಹ ವಾಹನ ಅವರ ಹೆಸರಿನಲ್ಲಿತ್ತು.

ಈ ಎರಡೂ ವಾಹನದ ಹೆಸರನ್ನ ಶ್ರೀದೇವಿಯವರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಈ ವಿಷಯ ಪತಿ ಗಣೇಶ್ ಕಡೆಯವರಾದ ಅಶೋಕ್, ಮುನಿಯಮ್ಮ, ವಸಂತ, ಷಣ್ಮುಖರವರ ಕಣ್ಣು ಕೆಂಪಗಾಗಿಸಿದೆ ಎಂದು ಶ್ರೀದೇವಿ ದೂರಿನಲ್ಲಿ ಆರೋಪಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಹಾರ್ನಹಳ್ಳಿ ಬಿಟ್ಟು ತಾಯಿ ಮನೆ ಯಲವಟ್ಟಿಯಲ್ಲಿ ಶ್ರೀದೇವಿ ಬಂದು ವಾಸವಾಗಿದ್ದಾರೆ. ಮೇ.14 ರಂದು ಶ್ರೀದೇವಿ ಗಂಡನ ಮನೆ ಕಡೆಯವರು ಬಂದು ಗಣೇಶ್ ಹೆಸರಿನಲ್ಲಿರುವ ವಾಹನಗಳ ಮಾಲಿಕತ್ವವನ್ನ ತಮ್ಮ ಹೆಸರಿಗೆ ಬದಲಿಸಿಕೊಡು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.

ಆದರೆ ಈ ದೂರು ಕೊಟ್ಟಿರುವುದು ಗಂಡ ಗಣೇಶನ ಕಡೆಯವರಿಗೆ ತಿಳಿದು ಬಂದಿದ್ದು ಮೇ.15 ರಂದು ರಾತ್ರಿ ಹಾರನಹಳ್ಳಿಯಿಂದ ಯಲವಟ್ಟಿಗೆ ಕಾರಿನಲ್ಲಿ ಬಂದು ಶ್ರೀದೇವಿಯವರನ್ನ ಥಳಿಸಿದ್ದಾರೆ. ನಮ್ಮ ವಿರುದ್ಧವೇ ದೂರು ಕೊಡ್ತೀಯಾ ಎಂದು ಚೀರಾಡುತ್ತಾ ಮನೆ ಒಳಗೆ ಅತಿಕ್ರಮಣ ಪ್ರವೇಶ ಮಾಡಿ ಅವ್ಯಾಚ್ಯ ಶಬ್ದಗಳಿಂದ‌ನಿಂದಿಸಿದ್ದಾರೆ.

ರಾತ್ರ ಬಹಳವಾಗಿದ್ದರಿಂದ ಅಕ್ಕಪಕ್ಕದಮನೆಯವರು ಬಂದು ಜಗಳ ಬಿಸಿದ್ದಾರೆ. ಬೆಳಿಗ್ಗೆ ಮಾತನಾಡೋಣವೆಂದು ತಿಳಿಸಿದ್ದರ ಮೇರೆಗೆ ಈ ನಾಲ್ವರು ಹೋಗುವಾಗ ನಿನ್ನ ಮತ್ತು ನಿನ್ನ ಮಗುವನ್ನ ಜೀವಂತ ಸಮೇತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಹೋಗಿದ್ದಾರೆ.

ಗ್ರಾಮಸ್ಥರು ಈ ಬಗ್ಗೆ ಪಂಚಾಯಿತಿ ಮಾಡಿ ಬಗೆಹರಿಸೋಣವೆಂದ ಕಾರಣ ಇಷ್ಟು ದಿನ ಸುಮ್ಮನಿದ್ದೆ ಎಂದು ತಿಳಿಸಿರು ಶ್ರೀದೇವಿಯವರು ಯಾವ ಪಂಚಾಯಿತಿಗೆಯೂ ನಡೆಯದ ಹಿನ್ನಲೆಯಲ್ಲಿ ನಿನ್ನೆ ಅಶೋಕ್, ಮುನಿಯಮ್ಮ, ವಸಂತ, ಷಣ್ಮುಖರವರ ವಿರುದ್ಧ ಎಫ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button