ಕ್ರೈಂ

ಸರಗಳ್ಳತನಕ್ಕೆ ಎಫ್ಐಆರ್-ಸರಗಳ್ಳತನದಲ್ಲಿ ರಾಜಸ್ಥಾನಿ ಗ್ಯಾಂಗ್ ಗಳ ಶಂಕೆ?

ಸುದ್ದಿಲೈವ್.ಕಾಂ/ಶಿವಮೊಗ್ಗ

ಮೊನ್ನೆ ಸೋಮವಾರ ರಾತ್ರಿ ವೇಳೆ ಬೆಕ್ಕಿನ ಕಲ್ಮಠದ ರಸ್ತೆಯಲ್ಲಿ ನಡೆದ ಸರಗಳ್ಳತನದ ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಶೇಷಾದ್ರಿಪುರದ 5 ನೇ ತಿರುವಿನಲ್ಲಿದ್ದ ಶುಭ ಎಂಬ ಮಹಿಳೆ ಕೋಟೆ ರಸ್ತೆಯಲ್ಲಿರುವ ವಿಂದ್ಯಶ್ರೀ ಸ್ಟೋರ್ ನಿಂದ ಹೊಳೆ ಬಸ್ ಸ್ಟಾಪ್ ಕಡೆಗೆ ಬಂದು ಮನೆಗೆ ನಡೆದುಕೊಂಡು ಹೋಗುವಾಗ ಶಂಕರ ಮಠ ರಸ್ತೆಯಲ್ಲಿರುವ ಆದಿ ಶಕ್ತಿ ಮೋಟಾರ್ಸ್ ಎದುರು ಇಬ್ಬರು ಅಪರಿಚಿತರು ಮೊಬೈನಲ್ಲಿ ಮಾತನಾಡುತ್ತಿದ್ದನ್ನ ಗಮನಿಸಿದ್ದಾರೆ.  ಓರ್ವ ಅಪರಿಚಿತ ಶುಭರನ್ನ ಹಿಂಬಾಲಿಸಿದ್ದಾನೆ.

ಮಹಿಳೆಯ ಕುತ್ತಿಗೆಗೆ‌ಕೈಹಾಕಿ ಮಾಂಗಲ್ಯ ಸರವನ್ನ ಎಳೆದಿದ್ದಾನೆ. ಮಹಿಳೆಯು ಮಾಂಗಲ್ಯಸರವನ್ನ ಬಿಗಿಯಾಗಿ ಹಿಡಿದುಕೊಂಡ ಪರಿಣಾಮ ಸರ ತುಂಡಾಗಿದ್ದು ಅರ್ಧ ತುಂಡು ಮಹಿಳೆ ಕೈಯಲ್ಲೂ ಹಾಗೂ ಅರ್ಧ ತುಂಡು ಸರಗಳ್ಳನ ಕೈ ಸೇರಿದೆ. ಸುಮಾರು 25 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳ್ಳನ ಕೈ ಸೇರಿದೆ ಎಂದು ಅಂದಾಜಿಸಲಾಗಿದೆ.

ಇಬ್ಬರೂ ಅಪರಿಚಿತರ ಪತ್ತೆಗೆ ಖಾಕಿ ಪಡೆ ಹುಡುಕಾಟ ತೀವ್ರಗೊಳಿಸಿದೆ.ಇವರೆಲ್ಲರೂ ರಾಜಸ್ಥಾನ ರಾಜ್ಯದಿಂದ ಬಂದು ಸರಗಳ್ಳತನ ಮಾಡಿರಬಹುದೇ ಎಂದು ಅಂದಾಜಿಸಲಾಗಿದೆ. ಈ ಕೃತ್ಯದಲ್ಲಿ ಒಂದು ದೊಡ್ಡ ಗ್ಯಾಂಗೇ ಇದೆ ಎಂದು ಸಮಕಿಸಲಾಗಿದೆ..

ಶಿವಮೊಗ್ಗ ಸೇರಿದಂತೆ ಇತರಡೆಗಳಲ್ಲಿ ಸರಗಳ್ಳತನ ನಡೆಸಯವುದೇ ದೊಡ್ಡ ದಂಧೆಯಾಗಿ ಈ ಗ್ಯಾಂಗ್ ಮಾಡಿಕೊಂಡಂತೆ ಕಂಡುಬಂದಿದೆ. ಜನವರಿಯಲ್ಲೂ ನಗರ ಮತ್ತು ಜಿಲ್ಲೆಯ ಇತರೆಡೆಯಲ್ಲಿ ಈ ಗ್ಯಾಂಗ್ ಕೃತ್ಯವೆಸಗಿ ಪರಾರಿಯಾಗಿದ್ದರು ಎನ್ನಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button