ಡಾ| ಸರ್ಜಿಯವರ ಪ್ರಯತ್ನದಿಂದ ಶಿವಮೊಗ್ಗದಲ್ಲಿ ದೊಡ್ಡ ಅನಾಹುತ ತಪ್ಪಿತು-ಬಿ. ವೈ. ರಾಘವೇಂದ್ರ

ಸುದ್ದಿಲೈವ್.ಕಾಂ/ಶಿವಮೊಗ್ಗ
ಬಿ. ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಾಸದಿಂದ ಬಾರಿ ಪ್ರಮಾದ ಸೃಷ್ಠಿಯಾಗಿತ್ತು, ಈ ಸಮಯದಲ್ಲಿ ನಮ್ಮ ಡಾ| ಧನಂಜಯ ಸರ್ಜಿ ಯವರ ವಿಶೇಷ ಪ್ರಯತ್ನ ಹಾಗೂ ಶೀಘ್ರವಾಗಿ ನೀಡಿದ ಆರೋಗ್ಯ ಸೇವೆ ಇಂದ ಶಿವಮೊಗ್ಗದಲ್ಲಿ ದೊಡ್ಡ ಅನಾಹುತ ತಪ್ಪಿತು ಇದನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.
ವಿದೇಶಿ ಮಾಧ್ಯಮದವರು ಕೊರೋನಾ ಪ್ರಾರಂಭದ ದಿನದಲ್ಲಿ ನಮಗೆ ಉತೃಷ್ಠ ಆರೋಗ್ಯ ವ್ಯವಸ್ಥೆ ಇದೆ, ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು/ ಅತಿಹೆಚ್ಚು ಜನಸಂಖ್ಯೆ ಇರುವ ನಮ್ಮ ದೇಶಗಳ ಬಗ್ಗೆ ಹಗುರವಾಗಿ ಮಾತನಾಡಿ, ರಸ್ತೆಯಲ್ಲಿ ಹೆಣದ ರಾಶಿ ನೋಡುವ ದಿನ ಹತ್ತಿರದಲ್ಲಿದೆ ಎಂದಿದ್ದರು. ಆದರೆ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಈ ಸಮಯದಲ್ಲಿ ನಾಯಕನಾಗಿ ಈ ದೇಶದ ನೇತೃತ್ವವನ್ನು ವಹಿಸಿಕೊಂಡ ಕಾರಣದಿಂದ ಸಾವು ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ.
ಇನ್ನು ಕೆಲವೇ ದಿನದಲ್ಲಿ ಈ ದೇಶವು 200 ಕೋಟಿ ವ್ಯಾಕ್ಸಿನೆಷನ್ ನೀಡಿದ ಹೆಗ್ಗಳಿಕೆಗೆ ನಮ್ಮ ದೇಶ ಪಾತ್ರವಾಗಲಿದೆ. ವ್ಯಾಕ್ಸಿನೆಷನ್’ಗಾಗಿ ಡಿಜಿಟಲ್ ಸರ್ಟಿಫಿಕೇಟ್ ನೀಡಿದೆ. ಆಯುಷ್ ಮಾನ್ ಭಾರತ ಆರೋಗ್ಯ ಯೋಜನೆ ಅಡಿಯಲ್ಲಿ 80 ಕೋಟಿ ಜನರಿಗೆ ಮೋದಿಯವರು ಉಚಿತವಾಗಿ ನೀಡಿದ್ದಾರೆ.ಪ್ರಧಾನ ಮಂತ್ರಿ ಜನೌಷಧಿಯ ಮೂಲಕ ಬಡವನಿಗೆ ಕಡಿಮೆ ದರದಲ್ಲಿ ಮಾತ್ರೆ ಔಷಧಿ ಸಿಗುತ್ತಿದೆ ಆರೋಗ್ಯವಂತ ಸಮಾಜದ ಸೃಷ್ಟಿಯಾಗಲಿ ಎಂದರು
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ,
ಸರ್ಜಿ ಆಸ್ಪತ್ರೆ ಸಮೂಹ ಸಂಯುಕ್ತಾಶ್ರಯದಲ್ಲಿ
ಆಶಾ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮವನ್ನು
ಸಂಸದರಾದ ಬಿ. ವೈ. ರಾಘವೇಂದ್ರ ಅವರು ಉದ್ಘಾಟಿಸಿ ಸರ್ಜಿ ಆರೋಗ್ಯ ಕಾರ್ಡ್, ಕೋವಿಡ್ ಕಿಟ್ ವಿತರಿಸಿದರು.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಪಟ್ಟಾಭಿರಾಮ್,
ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ್ರು, ಆಯನೂರು ಮಂಜುನಾಥ, ಸರ್ಜಿ ಆಸ್ಪತ್ರೆ ಸಮೂಹ ನಿರ್ದೇಶಕರಾದ ಮೆಡಿಕಲ್ ಡೈರೆಕ್ಟರ್ ಧನಂಜಯ ಸರ್ಜಿ,
ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಮಹಾನಗರ ಪಾಲಿಕೆ ಮಹಾಪೌರರಾದ ಸುನಿತಾ ಅಣ್ಣಪ್ಪ,
ಚೈತನ್ಯ ಸಂಸ್ಥೆಯ ಡಾ. ಶ್ರೀಪತಿ ಮತ್ತಿತರರು ಉಪಸ್ಥಿತರಿದ್ದರು.
