
ಸುದ್ದಿಲೈವ್. ಕಾಂ/ಶಿವಮೊಗ್ಗ
ನಾಡಾ ಬಂದೂಕು ರಿಪೇರಿ ಮಾಡಿಕೊಡುತ್ತಿದ್ದ ಶಂಕರಘಟ್ಟದ ಪಾಲಾಕ್ಷಪ್ಪನವರ ಮನೆಯ ಮೇಲೆ ಭದ್ರಾವತಿ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು 9 ನಾಡಬಂದೂಕು ಪತ್ತೆಯಾಗಿದೆ.
ಇಂದು ಮದ್ಯಾಹ್ನ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರಘಟ್ಟ ಗ್ರಾಮದ ವಾಸಿ ಪಾಲಾಕ್ಷಪ್ಪ ಎಂಬ ವ್ಯಕ್ತಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಹಳೆಯ ನಾಡ ಬಂದೂಕುಗಳನ್ನು ಅಕ್ರವಾಗಿ ಇಟ್ಟುಕೊಂಡು ರಿಪೇರಿ ಮಾಡಿಕೊಡುವ ಸೋಗು ಹಾಕುತ್ತಿದ್ದನು.
ಖಚಿತ ಮಾಹಿತಿಯ ಮೇರೆಗೆ ಗುನ್ನೆ ಸಂಖ್ಯೆ 0108/2022 ಕಲಂ 3, 25(A) ಆಯುಧ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ನಂತರ ಪಿಐ ಭದ್ರಾವತಿ ಗ್ರಾಮಾಂತರ ಠಾಣೆ ಮತ್ತು ಸಿಬ್ಬಂಧಿಗಳ ತಂಡ ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ.
ದಾಳಿಯಲ್ಲಿ ಆರೋಪಿ ಶಂಕರಘಟ್ಟದ ನಿವಾಸಿ ಪಾಲಾಕ್ಷಪ್ಪ(47)ನನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತನನಿಂದ ಪರವಾನಿಗೆ ಇಲ್ಲದ ಒಟ್ಟು 09 ಸಂಖ್ಯೆಯ ನಾಡ ಬಂದೂಕುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
