ಸುದ್ದಿ

ಜ್ಯೋತಿಷ್ಯ ಕೇಳಲು ಹೋದಾಗ ಇದ್ದ ಬೈಕ್ ಜ್ಯೋತಿಷ್ಯ ಕೇಳಿ ಬಂದನಂತರ ನಾಪತ್ತೆ!

ಸುದ್ದಿಲೈವ್.ಕಾಂ/ಭದ್ರಾವತಿ

ಜ್ಯೋತಿಷ್ಯ ಕೇಳಿ ವಾಪಾಸ್ ಬರುವ ವೇಳೆಗೆ ಹೋಂಡಾ ಆಕ್ಟೀವಾ ವಾಹನ ಕಾಣೆಯಾಗಿದೆ. ಘಟನೆ ಭದ್ರಾವತಿಯ ಜನ್ನಾಪುರದ ಚಂದ್ರಾಲಯದ ಮಂಟಪದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿರುವ ಜ್ಯೋತಿಷ್ಯರ ಮನೆ ಮುಂಭಾಗದಲ್ಲಿ ನಡೆದಿದೆ.

ಧಡಂಘಟ್ಟ ರಸ್ತೆಯ ಕವಲಗುಂದಿಯ ನಿವಾಸಿ ಕಮಲಮ್ಮ ಎಂಬುವರ ಪತಿ ಪುಟ್ಟೇಗೌಡ ಐದು ತಿಂಗಳ ಹಿಂದೆ ದೈವಾಧೀನರಾಗಿದ್ದರು. ಇವರು ಕೆಎ 14 ಎಸ್ 9232 ಕ್ರಮ ಸಂಖ್ಯೆಯ ಹೋಂಡಾ‌ ಆಕ್ಟೀವ್ ದ್ವಿಚಕ್ರ ವಾಹನ ಬಳಕೆ ಮಾಡುತ್ತಿದ್ದರು.

ಇವರ ನಿಧನದ ನಂತರ ಮೊಮ್ಮಗ ಚಕ್ರವರ್ತಿ ಬಳಸುತ್ತಿದ್ದರು. ಮೊನ್ನೆ ಜನ್ನಾಪುರದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿರುವ ಅರ್ಚಕರ ಮನೆಗೆ ಜ್ಯೋತಿಷ್ಯ ಕೇಳಲು ಅಜ್ಜಿ ಕಮಲಮ್ಮನ ಜೊತೆ ಆಕ್ಟೀವ್ ಹೊಂಡಾದಲ್ಲಿ ಬಂದಿದ್ದಾರೆ.

ಮಧ್ಯಾಹ್ನ 1-30 ರ ಅವಧಿಗೆ ಮನೆಗೆ ಹೋದ ಅಜ್ಜಿ ಮೊಮ್ಮಗ 3-30 ರ ಸಮಯದಲ್ಲಿ ಅರ್ಚಕರ ಮನೆಯಿಂದ ಹೊರಬಿದ್ದಿದ್ದಾರೆ. ಅರ್ಚಕರ ಮನೆಯ ಮುಂದೆ ನಿಲ್ಲಿಸಿದ್ದ ಹೋಂಡಾ ಆಕ್ಟೀವ್ ವಾಹನವನ್ನ ಕಳವು ಮಾಡಲಾಗಿದೆ. ಪ್ರಕರಣ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button