ಕ್ರೈಂ
ಮದುವೆಯಾಗಿ 12 ವರ್ಷದ ನಂತರ ಪತ್ನಿ ದಿಡೀರ್ ನಾಪತ್ತೆ!

ಸುದ್ದಿಲೈವ್. ಕಾಂ/ಶಿವಮೊಗ್ಗ
12 ವರ್ಷದ ಹಿಂದೆ ಮದುವೆಯಾದ ಮಹಿಳೆ ದಿಡೀರ್ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ದಾವಣಗೆರೆ ನಿವಾಸಿ ರೂಪ ಎಂಬುವರಿಗೆ ಮದುವೆಯಾಗಿದ್ದ ಅಶೋಕ ನಗರದ ನಿವಾಸಿ ವೀರಭದ್ರಯ್ಯ ಎಂಬುವರೊಂದಿಗೆ12 ವರ್ಷದ ಹಿಂದೆ ಮದುವೆಯಾಗಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ರೂಪರಿಗೆ ಮತ್ತು ವೀರಭದ್ರಯ್ಸರಿಗೆ ಗಂಡು ಮಗು ಹುಟ್ಟಿತ್ತು. ಆದರೆ ಮಗು ಮೃತಪಟ್ಟಿತ್ತು. ಆದರೆ ಮೊನ್ನೆ ವೀರಭದ್ರಯ್ಯ ಮಲಗಿರುವಾಗ ರೂಪ ದಿಡೀರ್ ಅಂತ ಕಾಣೆಯಾಗಿದ್ದಾಳೆ.
ಎಲ್ಲೂ ಹುಡುಕಿದರೂ ರೂಪ ಪತ್ತೆಯಾಗಿಲ್ಲ. ತವರು ಮನೆಗೆ ಹೋಗಿರಬಹುದು ಎಙದು ವಿಚಾರಿಸಿದರೂ ಅಲ್ಲಿಗೂ ಹೋಗಿಲ್ಲ. ಆದರೆ ಪತಿ ವೀರಭದ್ರಯ್ಯ ಈ ಪ್ರಕರಣದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ತಾವು ವಾಸಿಸುವ ಮನೆಯ ಮೇಲೆ ಪ್ಲಂಬಿಂಗ್ ಕೆಲಸಮಾಡುವನೊಂದಿಗೆ ಸಲುಗೆ ಇಂದ ಇದ್ದ ರೂಪ ಈತನೊಂದಿಗೆ ಹೋಗಿರಬಹುದು ಎಂಬ ಅನುಮಾನವನ್ನ ವೀರಭದ್ರಯ್ಯ ಎಫ್ಐಆರ್ ನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
