ಕ್ರೈಂ

ವಿನೋಬ ನಗರ ರೈಲ್ವೆ ಗೇಟ್ ಬಳಿ ರಾಬರಿ-ತಡರಾತ್ರಿಯಲ್ಲಿ ನಡೆದ ಘಟನೆ

ಹೊಳೆಹೊನ್ನೂರು ಎಎಸ್ಐ ಕೋಟಿ ನಾಯ್ಕ್ ಪುತ್ರನಿಗೆ ಚಾಕುವಿನಿಂದ ಇರಿತ

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗ ವಿನೋಬ ನಗರ ರೈಲ್ವೆ ಗೇಟಿನ ಬಳಿ ಬಂದ ಕಾರಿಗೆ ಏಕಾಏಕಿ ಮೂವರು ಜನ ಅಡ್ಡಕಟ್ಟಿ ಕಾರು ಚಲಾಯಿಸುತ್ತಿದ್ದ ಯುವಕನಿಗೆ ಚಾಕುವಿನಿಂದ ಚುಚ್ಚಿ ಎರಡು ಸಾವಿರ ರೂ. ಕಿತ್ತುಕೊಂಡು ಹೋಗಿರುವ ಘಟನೆ ತಡರಾತ್ರಿಯ ವೇಳೆ ನಡೆದಿದೆ.

ಹುಣಸೋಡಿನಲ್ಲಿ ನಡೆಯುತ್ತಿದ್ದ ರಿಸೆಪ್ಷನ್ ಕಾರ್ಯಕ್ರಮ ಮುಗಿಸಿಕೊಂಡು ಬೊಲೆನೋ ಕಾರಿನಲ್ಲಿ ವಾಪಾಸ್ ಕೋಟೆಗಂಗೂರಿನ ಶಕ್ತಿಧಾಮ ಲೇಔಟ್ ನಲ್ಲಿರುವ ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದೆ.

ಮಯೂರು ನಾಯ್ಕ್, ತಾಯಿ ಜಯಲಕ್ಷ್ಮೀ ಬಾಯಿ ಹಾಗೂ ಸಹೋದರ ಹರೀಶ್ ಸ್ಕಂದ ಕಾರಿನಲ್ಲಿದ್ದು  ಯುವಕ ಮಯೂರ ನಾಯ್ಕ್ ಕಾರು ಚಲಾಯಿಸುತ್ತಿದ್ದರು. ಇವರೆಲ್ಲರೂ ಹೊಳೆಹೊನ್ನೂರು ಪಿಎಸ್ ಐ ಕೋಟಿ ನಾಯ್ಕ್ ರವರ ಕುಟುಂಬವಾಗಿದೆ.

ಸಳಂಗ ರಸ್ತೆಯ ಮೂಲಕ ಕೀರ್ತಿನಗರ, ಕೀರ್ತಿನಗರದಿಂದ ವಿನೋಬ ನಗರದ ರೈಲ್ವೆ ಗೇಟಿನ ಬಳಿ ಬರುತ್ತಿದ್ದ ವೇಳೆ ಚಲಿಸುತ್ತಿದ್ದ ಕಾರು ಹಂಪ್ಸ್ ನಿಂದ ನಿಧಾನಗೊಂಡಿದೆ.  ಹಂಪ್ಸ್ ಹತ್ತುವ ವೇಳೆಯಲ್ಲಿ ದಿಡೀರನೇ ಕಾರು ಆಫ್ ಆಗಿದೆ.

ಇನ್ನೇನು ಕಾರನ್ನ ಸ್ಟಾರ್ಟ್ ಮಾಡಬೇಕು ಎನ್ನುವಷ್ಟರಲ್ಲಿ ಸುಮಾರು 20-25 ಜನ ಮೂವರು ಅಪರಿಚಿತ ಯುವಕರು ಕಾರಿಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ  ಕಾರಿನ ಡೋರ್ ತೆಗೆದು ಮಯೂರ ಹಾಕಿಕೊಂಡಿದ್ದ ಕನ್ನಡಕಕ್ಕೆ ಮುಷ್ಠಿಕಟ್ಟಿ ಹೊಡೆದಿದ್ದಾರೆ. ಓರ್ವ ಮಯೋರನನ್ನ ಚಾಲಕನ ಸೀಟಿನಿಂದ ಹೊರ ಎಳೆದಿದ್ದಾನೆ. ಬಲಗಾಲಿಗೆ ಚಾಕುವಿನಿಂದ ಚುಚ್ಚಿದ್ದಾನೆ.

ತಾಯಿ ಜಯಲಕ್ಷ್ಮೀ ಬಾಯಿ ಮತ್ತು ಸಹೋದರ ಹರೀಶ್ ಸ್ಕಂದನಿಗೆ ರೇಜರ್ ತೋರಿಸಿ ಇವರ ಬಳಿ ಇದ್ದ 2000 ಸಾವಿರ ರೂ ಕಿತ್ತುಕೊಂಡಿದ್ದಾನೆ. ಮೊಬೈಲ್ ಎತ್ತುಕೊಂಡು ಕರೆ ಮಾಡಲು ಬಿಡದೆ ಬೆದರಿಕೆ ಹಾಕಿದ್ದಾರೆ.IMG-20220525-WA0000 ಗಾಯಗೊಂಡ‌ ಮಯೂರ್ ನಾಯ್ಕ್ ನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ವಿನೋಬ ನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಘಟನೆ ನಡೆದಿದೆ. ಸಮಾಜ ಘಾತಕರಾಗಿ ಪರಿಣಮಿಸುತ್ತಿರುವ ಇಂತಹ ದುಷ್ಟಶಕ್ತಿಗಳನ್ನ ಪೊಲೀಸರು ಸದೆ ಬಡಿಯಬೇಕಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button