ಸ್ಥಳೀಯ ಸುದ್ದಿಗಳು

ಹಸಿರು ಶಾಲು ಹೊದ್ದುಕೊಂಡವರಿಗೆ ಸಿರಿಗೆರೆ ಶ್ರೀಗಳ ಬಹಿರಂಗ ಸವಾಲು ಏನುಗೊತ್ತಾ?

ಕುವೆಂಪುರಂಗಮಂದಿರದಲ್ಲಿ ಪುಸ್ತಕ ಬಿಡುಡೆಗೊಳಿಸಿ ಶ್ರೀಗಳ ಮಾತು

ಸುದ್ದಿಲೈವ್.ಕಾಂ/ಶಿವಮೊಗ್ಗ

ಹಸಿರು ಶಾಲು ಹೊತ್ತಕೊಂಡರಿಗೆ ಸಿರಿಗೆರೆ ಮಠದ ಡಾ. ಡಾ.ಶಿವಮೂರ್ತಿ ಶಿವಾಚಾರ್ಯ ವೇದಿಕೆ ಮೇಲಿಂದಲೇ ಸವಾಲೆಸೆದಿದ್ದಾರೆ.

ಅವರು ನಗರದ ಕುವೆಂಪು ರಂಗ ಮಂದಿರದಲ್ಲಿ ರೈತ ಸಂಘದ ಹೆಚ್ ಆರ್ ಬಸವರಾಜಪ್ಪನವರ ಹಸಿರು ಹಾದಿಯ ಕಥನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ರಾಜಕೀಯ ಪಕ್ಷಗಳ ಶಾಲು ಹಾಕಿಕಪಂಡರೆ ಸಂಘಟನೆ ಬಿಟ್ಟು ಹೋಗಿ ಎಂದು ತರಳಬಾಳು ಮಠದ ಸವಾಲೆಸೆದಿದ್ದಾರೆ.

ರೈತರ ಮಗನಾಗಿ ಹಸಿರು ಶಾಲು ಹಾಕಿದರೆ ರೈತನಿಗಾಗಿ ಹೋರಾಡಬೇಕು. ಆಯಾ ರಾಜಕೀಯ ಪಕ್ಷಗಳ ಶಾಲು ಹಾಕಿಕೊಂಡರೆ ಅಂತಹವರು ಸಂಘದಲ್ಲಿ ಇರಬಾರದು. ಹಸಿರು ಶಾಲು ಯಾವುದೇ ಪಕ್ಷಗಳಿಗೆ ವಿಲೀನ ಆಗಬಾರದು ಇದು ನಿಮಗೆ ಹಾಕುತ್ತಿರುವ ಸವಾಲಾಗಿದೆ ಎಂದು ತಿಳಿಸಿದರು.

ಹೆಚ್ ಎಸ್ ರುದ್ರಪ್ಪ, ಸುಂದರೇಶ್ ನವರ ಕಾಲದಲ್ಲಿ ಹುಟ್ಟಿದ ರೈತರ ಸಂಘ ನಂತರದ ದಿನದಲ್ಲಿ ವಿಭಜನೆ ಆಗಿದೆ. ಯಾಕೆ ಈ ಹಾದಿಯಲ್ಲಿ ಸಾಗಿದೆ. ಎಂಬುದು ಅಧ್ಯಾಯನ ಆಗಬೇಕಿದೆ. ಇಡೀ ರಾಜ್ಯದಲ್ಲಿ ಬಹುಸಂಖ್ಯಾತರಾದ ಕೃಷಿಕರು ನೀವು ಬಯಸುವ ಪಕ್ಷ ಅಥವಾ ವ್ಯಕ್ತಿಯನ್ನ ಅಧಿಕಾರಕ್ಕೆ ತರಲಾಗುತ್ತಿಲ್ಲ.

ಬದುಕಿನ ಪೂರ್ವಕ್ಕೆ ನಡೆದ ಘಟನೆಗಳು ಬಸವರಾಜಪ್ಪನವರದ್ದು ದಾಖಲಾಗಿವೆ. ತಹಶೀಲ್ದಾರ್ ಅವರ ಮನೆಗೆ ಬಂದು ಕಿರಿಕಿರಿ ಮಾಡುದ್ರಲ್ಲಾ ಅದೇ ಮೊದಲನೇ ಮುಳ್ಳಿನ ಹಾದಿಯಾಗಿವೆ ಎಂದರು.

ಸ್ವಾತಂತ್ರ್ಯದ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಕೆಲ ವ್ಯತ್ಯಾಸಗಳಾಗಿಲ್ಲ. ರಾಜ್ಯದ ಬೆನ್ಬಲುಬು ಎಂದು ಮಾತನಾಡಿ ರೈತರನ್ನ ಬಗ್ಗುಬಡೆದವರು ಅಧಿಕಾರಿಗಳು. ಇದೇಕೆಲಸವನ್ನ ಬ್ರಿಟೀಶರು ಸ್ವಾತಂತ್ರ್ಯದ ಪೂರ್ವದ ಬೆಳವಣಿಗೆಯಾಗಿತ್ತು. ಹಾಗಾಗಿ ಯಾವ ವ್ಯತ್ಯಸವಿಲ್ಲ ಎಂದರು.

85% ಇದ್ದ ರೈತರು ಅಧಿಕಾರಕ್ಕೆ ಬರಲಾಗಲಿಲ್ಲ ಈಗ ರೈತರು 65% ಇದ್ದಾಗಲೂ ಅಧಿಕಾರಕ್ಕೆ ತರಲಾಗಿಲ್ಲ. ಮದುವೆ ವಯಸ್ಸಿಗೆ ಬಂದ ಮಕ್ಕಳನ್ನ ಮದುವೆ ಮಾಡಬೇಕೆ ವಿನಃ ಅಪ್ಪ ಅಮ್ಮನೇ ಮದುಮಕ್ಕಳಾಗಬಾರದು ಎಂದು ಸಂಘಟನೆ ಚುನಾವಣೆಯಲ್ಲಿ ಭಾಗಿಯಾಗುವರನ್ನ ರೈತ ಸಂಘಟನೆಯ ಚುಕ್ಕಾಣಿ ಹಿಡಿಯುವ ಹಂಬಲ ಇಟ್ಟುಕೊಳ್ಳುವವರಾಗಬಾರದು.

ಎಲ್ಲಿಯ ವರೆಗೂ ಅಧಿಕಾರ ಇಟ್ಟುಕೊಳ್ಳುತ್ತೀರೋ ರೈತ ಸಂಘ ವಿಭಜನೆ ಆಗುತ್ತಲೇ ಹೋಗುತ್ತಿದೆ. ಕಾಂಗ್ರೆಸ್ ವಿಸರ್ಜಿಸಲು ಗಾಂಧಿ ತಿಳಿಸಿದ್ದರು. ಆದರೆ ಹಾಗೆ ಆಗಲಿಲ್ಲ. ಹಾಗಾಗಿ ರಾಜಕೀಯ ಆಸೆ ಆಕಾಂಕ್ಷೆಗಳು ಇರಬಾರದು. ಸಂಘಟನೆ ಕಿಂಗ್ ಮೇಕರ್ ತರಹ ಕೆಲಸ ಮಾಡಬೇಕು ಅದನ್ನ 1995 ರಲ್ಲಿ ನಡೆದಿತ್ತು.

1995 ರಲ್ಲಿ ಮಠದ ವತಿಯಿಂದ ಐದು ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡು ದೆಹಲಿ ಆಡಳಿತ ಚುಕ್ಕಾಣಿ ಹಿಡಿಯ ಬಾರದು ಹಳ್ಳಿಯಿಂದ ಆಡಳಿತ ನಡೆಸಬೇಕೆಂಬ ಹಂಬಲದಿಂದ ಪಾನ ಮುಕ್ತ ಆಡಳಿತವಾಗಬೇಕೆಂದು ಚುನಾವಣೆಗೆ ತಿಳಿಸಲಾಗಿತ್ತು. ಯಶಸ್ವಿಯಾಗಿದ್ದೆವು. ಹಾಗೆ ರೈತ ಸಂಘ ಕೆಲಸಮಾಡಬೇಕಿದೆ ಎಂದುಕರೆನೀಡಿದರು.

ಲಿಂಗಾಯಿತ ಧರ್ಮ ಒಂದು ದರ್ಮವಾಗಿ ಉಳಿದಿಲ್ಲ. ಹಿಂದುಳಿದ ಲಿಂಗಾಯಿತ, ಲಿಂಗಾಯಿತ ಕ್ಷೌರಿಕ ಎಂದು ಬಣ್ಣಿಸಲಾಗಿದೆ. ಧರ್ಮಕ್ಕೂ ಜಾತಿಸೋಂಕು ಬಂದಿದೆ. ಜಾತಿಯನ್ನ ಬದಿಗಿಟ್ಟು ಲಿಂಗಾಯಿತ ಧರ್ಮ ಎಂದು ಹುಟ್ಟು ಹಾಕಿದರೋ ಆಯಾ ಶರಣರೇ ಒಙದೊಂದು ಜಾತಿಗೆ ದಾರ್ಶನಿಕರಾದರು. ಇದು ದುರಂತವೆಂದರು.

ಬರೀ ಹಸಿರು ಹಾದಿ ಜಥನ ಅಲ್ಲ ಹಸಿರು ಶಾಲಿನ ಮುಳ್ಳಿನ ಹಾದಿಯ ಕಥನ ಎಂದರು. ಮುಂದಿನ ಚುನಾವಣೆಯಲ್ಲಿ ಬಸವರಾಜಪ್ಪನವರಿಗೆ ಸ್ಪರ್ಧಿಸದಂತೆ ತಾಕೀತು ಮಾಡಿದರು. ಕೆಲಸಗಳನದನ ನೀವು ಹೇಳಿದಂತೆ ಮಾಎಉವಂತಹ ಕೆಲಸ ಮಾಡಬೇಕಿದೆ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button