ಕ್ರೈಂ
ಜೈಲ್ ವೃತ್ತದ ಬಳಿ ಬೊಲೆರೋ ಮತ್ತು ಪ್ಯಾಸೆಂಜರ್ ಆಟೋ ನಡುವೆ ಡಿಕ್ಕಿ

ಸುದ್ದಿಲೈವ್. ಕಾಂ/ಶಿವಮೊಗ್ಗ
ನಗರದ ಜೈಲ್ ವೃತ್ತದ ಬಳಿ ಬೊಲೆರೋ ಪಿಕಪ್ ಮತ್ತು ಪ್ಯಾಸೆಂಜರ್ ಆಟೋ ನಡುವೆ ಡಿಕ್ಕಿ ಉಂಟಾಗಿದ್ದು ಆಟೋದಲ್ಲಿದ್ದ 6 ಜನರಿಗೆ ಗಾಯಗಳಾಗಿವೆ.
ಬೊಮ್ಮನ್ ಕಟ್ಟೆಯಯಿಂದ ಬರುತ್ತಿದ್ದ ಕೆಎ 14 ಬಿ 9146 ಮತ್ತು ನಂಜಪ್ಪ ಆಸ್ಪತ್ರೆಯ ಕಡೆಯಿಂದ ಬಂದ ಬೊಲೆರೋ ವಾಹನ ಕೆ ಎ 14 ಸಿ 1398 ಬೊಲೆರೋ ಪಿಕಪ್ ನಡುವೆ ಡಿಕ್ಕಿ ಉಂಟಾಗಿದೆ.
ಆಟೋದಲ್ಲಿದ್ದ ಐವರು ಪ್ಯಾಸೆಂಜರ್ ಗೆ ಗಾಯಗಳಾಗಿವೆ. ಇದರಲ್ಲಿ ಒಬ್ವರು ಮಹಿಳಾಪ್ಯಾಸೆಂಜರ್ ಒಬ್ವರಾಗಿದ್ದಾರೆ. ಆಟೋದ ಗಾಜುಗಳು ಪುಡಿಯಾಗಿವೆ. ಟಾಪ್ ಹಾಳಾಗಿವೆ. ಓವರ್ ಪ್ಯಾಸೆಂಜರ್ ಕೂರಿಸಿಕೊಂಡು ಬಂದಿರುವ ಬಗ್ಗೆ ಮಹಿಳಾ ಪ್ಯಾಸೆಂಜರ್ ಆಕ್ಷೇಪಿಸಿದ್ದಾರೆ.
ಬೊಲೆರೋ ಚಾಲಕ ನಂಜಪ್ಪ ಆಸ್ಪತ್ರೆಯ ಎದುರಿನ ಮೆಡಿಕಲ್ ಶಾಪ್ ನಿಂದ ಮೆಡಿಸಿನ್ ತೆಗೆದುಕೊಂಡು ಬರುವಾಗ ಈ ಅಪಘಾತ ಸಂಭವಿಸಿದೆ. ಈ ಘಟನೆ ಇಂದು ಸುಮಾರು 9-10 ರ ಸಮಯದಲ್ಲಿ ನಡೆದಿದೆ. ಎರಡೂ ವಾಹನವನ್ನ ಶಿವಮೊಗ್ಗದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.
