ಓಲಾ ಎಲೆಕ್ಟ್ರಿಕ್ ವಾಹನ ಖರೀದಿಸಲು ಮುಂದಾದ ವ್ಯಕ್ತಿಗೆ ಹಣದ ವಂಚನೆ
ಆನ್ ಲೈನ್ ನಲ್ಲಿ ಖರೀದಿಸಲು ಮುಂದಾದ ವ್ಯಕ್ತಿಗೆ ವಂಚನೆ

ಸುದ್ದಿಲೈವ್. ಕಾಂ/ಶಿವಮೊಗ್ಗ
ಓಲಾ ಆಪ್ ನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸಲು ಮುಂದಾದ ಉದ್ಯಮಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ 20 ಸಾವಿರರೂ. ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಓಲಾ ಆಪ್ ನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸಲು ಮುಂದಾದ ಉದ್ಯಮಿ ವೆಂಕಟೇಶ್ ಓಲಾ ಆಪ್ ಡೌನ್ ಲೋಡ್ ಮಾಡಿಕೊಂಡು ಮಗ ನಂದೀಶನ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪಾಸ್ ಪೋರ್ಟ್ ಸೈಜ್ ನ ಫೋಟೊಗಳನ್ನ ಅಪ್ ಲೋಡ್ ಮಾಡಿದ್ದಾರೆ.
ಓಲಾ ಸ್ಕೂಟರ್ ಬುಕ್ ಮಾಡಲು 499 ರೂ ಹಣ ಕಟ್ಟುವಂತೆ ಸೂಚಿಸಲಾಗಿದೆ. ಅದರಂತೆ ಮಗನ ಮೊಬೈನ್ ನಿಂದ ಫೊನ್ ಪೇ ಮಾಡಲಾಗಿದೆ. ಮಗನ ಫೊನ್ ಪೇ ಮೂಲಕ ಹಣವನ್ನೂ ತುಂಬಿದ್ದಾರೆ.
ಆದರೆ ಮರುದಿನ ಯಾವನೋ ಅಪರಿಚಿತ ನಂಬರ್ ನಿಂದ ಕರೆಮಾಡಿದ ವ್ಯಕ್ತಿಯೊಬ್ಬ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸಂಸ್ಥೆಯಿಂದ ಮಾತನಾಡುತ್ತಿರುವುದು ಎಂದು ನಂಬಿಸಿ ಸ್ಕೂಟರ್ ಖರೀದಿಸಲು ವಾಟ್ಸಪ್ ಗೆ ಕಳುಹಿಸಿರುವ ಬ್ಯಾಂಕ್ ಖಾತೆಗೆ 20 ಸಾವಿರ ರೂ. ಹಣ ತುಂಬಿದರೆ ಸ್ಕೂಟರ್ ದೊರೆಯಲಿದೆ ಎಂದು ನಂಬಿಸಿದ್ದಾನೆ.
ಆತ ತಿಳಿಸಿದ ಪ್ರಕಾರ 20 ಸಾವಿರ ರೂ ಹಣವನ್ನ ವೆಂಕಟೇಶ್ ಆರ್ ಟಿ ಜಿ ಎಸ್ ಮಾಡಿದ್ದಾರೆ. ನಂತರ ಆತನ ಮೊಬೈಲ್ ಮತ್ತು ನಂಬಿಸಿ ವಂಚಿಸಿರುವ ಬಗ್ಗೆ ವೆಂಕಟೇಶ್ ಗೆ ಅರಿವಿಗೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
