ಸುದ್ದಿ

ರೈಲ್ವೆ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ತಾಯಿ ಮತ್ತು ಮಕ್ಕಳ ರಕ್ಷಣೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡಿಕೊಂಡು ಅಡ್ಡಾಡಿಕೊಂಡಿದ್ದ ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳನ್ನ ರೈಲ್ವೆ ಪೊಲೀಸರು ಮಕ್ಕಳ ಸಹಾಯವಾಣಿಗೆ ಹಸ್ತಾಂತರಿಸಿದ್ದಾರೆ.

ಉತ್ತರ ಪ್ರದೇಶದಿಂದ ಬಂದ‌ ಇವರುಗಳಲ್ಲಿ ಮಕ್ಕಳನ್ನ ತಪಾಸಣೆ ನಡೆಸಿದಾಗ ಮಕ್ಕಳು ತಾಯಿಗಿಂತ ತಂದೆಯ ಜೊತೆ ಇರಲು ಬಯಸುತ್ತಿರುವುದು ಬೆಳಕಿಗೆ ಬಂದಿದೆ.

ಬುದ್ದಿಮಾಂದ್ಯರಾಗಿದ್ದ ತಾಯಿ ಕವಿತಾ 45 ವರ್ಷದವಳಾಗಿದ್ದು ಈಕೆಯ ಗಂಡ ನರ್ಪಾಲ್ ಎಂದು ತಿಳಿದುಬಂದಿದ್ದು ಪ್ರತಿಭಾರಿಯು ನರ್ಪಾಲ್ ನ ಜೇಬಿನಿಂದ ಹಣ ತೆಗೆದುಕೊಂಡು ಮನೆ ಬಿಟ್ಟು ಹೋಗುವುದು ತಿಳಿದು ಬಂದಿದೆ.

ರೈಲಿನಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ವೇಳೆ ಶಿವಮೊಗ್ಗ ರೈಲ್ವೆ ಪೊಲೀಸ್ ಬಿ.ಎನ್ ಕುಬೇರಪ್ಪ ಮತ್ತು ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.  ತಾಯಿ ಮೂರು ಪುಟ್ಟ‌ಪುಟ್ಟ ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗುವಿದ್ದು ಇವರಿಗೆ ಪುನರ್ವಸತಿ ಕಲ್ಪಿಸಲು ಶಿವಮೊಗ್ಗದ ಮಕ್ಕಳ ರಕ್ಷಣ ಸಮಿತಿಯಲ್ಲಿರುವ ಮಕ್ಕಳ ಸಹಾಯವಾಣಿಗೆ ಹಸ್ತಾಂತರಿಸಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button