ಕ್ರೈಂ
ಗಾಂಜಾ ಮಾರುತ್ತಿದ್ದ ಯುವಕನ ಬಂಧನ

ಸುದ್ದಿಲೈವ್.ಕಾಂ/ಶಿವಮೊಗ್ಗ
ಸಂಗ್ರಹಿಸಿದ ಗಾಂಜಾವನ್ನ ಸಾರ್ವಜನಿಕರಿಗೆ ಮಾರಾಟಮಾಡುತ್ತಿದ್ದ ಆರೋಪಿಯನ್ನ ತುಂಗ ನಗರ ಪೊಲೀಸರು ಬಂಧಿಸಿದ್ದಾರೆ.
ಇಂದು ಟಿಪ್ಪು ನಗರದ ಕೆಕೆ ಶೆಡ್ ನ ಹತ್ತಿರ ಖಾಲಿ ಸ್ಥಳದಲ್ಲಿ ಸಂಗ್ರಹಿಸಿದ್ದ ಮಾದಕ ವಸ್ತು ಗಾಂಜಾವನ್ನ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿ ಮಹಮ್ಮದ್ ತಬಾರಕ್ ವುಲ್ಲಾ ಎಂಬ ಯುವಕನನ್ನ ತುಂಗ ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಹಮ್ಮದ್ ತಬಾರಕ್ ವುಲ್ಲಾ (21) ಕೆಳಗಿನ ತುಂಗಾನಗರದ ನಿವಾಸಿಯಾಗಿದ್ದು ಬಂಧಿತ ಆರೋಪಿತನಿಂದ ಅಂದಾಜು ಮೌಲ್ಯ 35,000/- ರೂ ಗಳ ಒಟ್ಟು 910 ಗ್ರಾಂ ಒಣ ಗಾಂಜಾ ಮತ್ತು ರೂ 200/- ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಆರೋಪಿತನ ವಿರುದ್ಧ ಗುನ್ನೆ ಸಂಖ್ಯೆ 0235/2022 ಕಲಂ 20(B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
