ಕ್ರೈಂ
ಬೀಗರ ಔತಣ ಸಂದರ್ಭದಲ್ಲಿ ಗ್ಯಾಸ್ ಲೀಕೇಜ್-ತಪ್ಪಿದ ಭಾರಿ ದುರಂತ

ಸುದ್ದಿಲೈವ್.ಕಾಂ/ಶಿವಮೊಗ್ಗ
ಮದುವೆಯಾಗಿ ಮರುದಿನ ಬೀಗರ ಔತಣ ನಡೆಯಲು ಸಿದ್ಧತೆಗೊಂಡಿದ್ದ ಸಂದರ್ಭದಲ್ಲಿ ಗ್ಯಾಸ್ ಲೀಕೇಜ್ ಆಗಿ ಮನೆ ಸಾಮಾಗ್ರಿ ಮತ್ತು ಇತರೆ ಗೃಹ ಉಪಯೋಗಿ ವಸ್ತುಗಳು ಕರಲಾಗಿರುವ ಘಟನೆ ನಡೆದಿದೆ.
ಪುರುದಾಳಿನ ಶ್ರೀಧರ್ ಎಂಬುವರ ಮನೆಯಲ್ಲಿ ನಿನ್ನೆ ಮದುವೆ ಕಾರ್ಯ ನಡೆದಿತ್ತು. ಇಂದು ಬೀಗರ ಔತಣ ನಡೆಯಬೇಕಿತ್ತು. ಇಂದು ಬೆಳಿಗ್ಗೆ 9 ಗಂಟೆಯ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಅನಾಹುತಕ್ಕೆ ಕಾರಣವಾಗಿತ್ತು.
ತಕ್ಷಣವೇ ಅಗ್ನಿಶಾಮಕ ದಳದವರಿಗೆ ಕರೆ ಮಾಡಲಾಗಿದೆ. ಸ್ಥಳಕ್ಕೆ ಬರುವ ವೇಳೆ ಮನೆಯಲ್ಲಿದ್ದ ಗೃಹಬಳಕೆ ವಸ್ತು, ದಿನಸಿ ಸಾಮಾನುಗಳು ಅಡುಗೆ ಮನೆಯ ಟೈಲ್ಸ್ ಸುಟ್ಟು ಕರಕಲಾಗಿವೆ. ಸುಮಾರು 1 ಲಕ್ಷ ರೂ ನಷ್ಟ ಅಂದಾಜಿಸಲಾಗಿದೆ.
ಅಗ್ನಿಶಾಮಕದಳದ ಸಿಬ್ಬಂದಿ ಗಳು ಬೆಂಕಿ ಆರಿಸಿದ್ದಾರೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
