ಕ್ರೈಂ
ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿರುವಾಗಲೇ ಇನ್ನೊಬ್ಬಳೊಂದಿಗೆ ಮದುವೆ-ದೂರು ದಾಖಲು

ಸುದ್ದಿಲೈವ್. ಕಾಂ/ಶಿವಮೊಗ್ಗ
ವರದಕ್ಷಿಣೆ ಕಿರುಕುಳ, ಇನ್ನೊಂದು ಮದುವೆಯಾದ ಹಿನ್ನಲೆಯಲ್ಲಿ ಪತಿಯ ವಿರುದ್ಧವೇ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮದುವೆಯಾಗಿ 15 ವರ್ಷ ಕಳೆದಿದ್ದು, ಆಗ ಪತಿಯ ಮನೆಯವರು 10 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ವರದಕ್ಷಿಣೆ ಹಣ ಪಡೆದಿದ್ದರು. ಈಗ 14 ವರ್ಷದ ಮಗಳಿದ್ದು ಬಾಕಿ ವರದಕ್ಷಿಣೆಯನ್ನ ಪಡೆದುಕೊಂಡು ಬಾ ಎಂದು ಪತಿ ದೇವೇಂದ್ರಪ್ಪ ಪತ್ನಿ ಮತ್ತು ಮಗಳಿಗೆ ಪ್ರತಿದಿನ ಕುಡಿದುಕೊಂಡು ಬಂದು ಹೊಡೆಯುತ್ತಿದ್ದನು.
ಈ ಜಗಳ ಒಮ್ಮೆ ಗುರು ಹಿರಿಯರ ನಡುವೆ ಪಂಚಾಯ್ತಿನೂ ನಡೆದಿತ್ತು. ಸುಧಾರಿಸದ ದೇವೇಂದ್ರಪ್ಪನ ವಿರುದ್ಧ ಪತ್ನಿ ಗಾಯಿತ್ರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.ಈ ಮಧ್ಯೆ ದೇವೇಂದ್ರಪ್ಪ ಇನ್ನೊಂದು ಮದುವೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪತ್ನಿ ಕುಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
