
ಸುದ್ದಿಲೈವ್. ಕಾಂ/ಭದ್ರಾವತಿ
ಪ್ರೀತಿಸಿ ಮದುವೆಯಾಗಿದ್ದ ಗಂಡ 7 ವರ್ಷದ ನಂತರ ದಿಡೀರ್ ಅಂತ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆ ಬಸಲೀಕಟ್ಟೆ ಸಿದ್ದಾಪುರದ ನಿವಾಸಿ ವಿನೋದ್ ಕುಮಾರ್. ಡಿ (27) ಜ್ಯೋತಿ ಎಂಬ ಯುವತಿಯೊಂದಿಗೆ ಪರಸ್ಪರ ಪ್ರೀತಿಸಿ 7 ವರ್ಷದ ಹಿಂದೆ ಮದುವೆಯಾಗಿದ್ದನು. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.
ಇಬ್ಬರ ನಡುವೆ ಅನೂನ್ಯವಾದ ಹೊಂದಾಣಿಕೆ ಇತ್ತು. ವಿನೋದ್ ಪೇಯಿಂಟಿಗ್ ವೃತ್ತಿ ಮಾಡಿಕೊಂಡಿದ್ದನು. ಪತ್ನಿ ಶಾಹೀ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದರು. ಮೊನ್ನೆ ಮೇ.20 ರಂದು ಸ್ನೇಹಿತನ ಮನೆ ಗೃಹಪ್ರವೇಶ ಇದೆ ಹೀಗಿ ಬರುತ್ತೇನೆಂದು ಬೆಳಿಗ್ಗೆ ಹೋಗಿದ್ದಾರೆ.
ಮಧ್ಯಾಹ್ನ ಮಳೆ ಹೆಚ್ಚಾಗಿ ಬರಲಿದೆ ಬೇಗ ಮನೆಗೆ ಬಾ ಎಂದು ಜ್ಯೋತಿ ಮೊಬೈಲ್ ಕರೆ ಮಾಡಿ ತಿಳಿಸಿದ್ದಾರೆ. ಇನ್ನೊಂದು ಅರ್ಧ ಗಂಟೆಯಲ್ಲಿ ಮನೆಯಲ್ಲಿರುತ್ತೇನೆ ಎಂದ ವಿನೋದ್ ಮಧ್ಯಾರಾತ್ರಿ 12 ಆದರೂ ಮನೆಗೆ ಬರಲಿಲ್ಲ. ಗಾಬರಿಗೊಂಡ ಪತ್ನಿ ಎರಡೂ ಸಿಮ್ ಗೂ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಬಂದಿದೆ.
ರಾತ್ರಿ 12 ಗಂಟೆ ಆದರೂ ಮನೆಗೆ ಬರುತ್ತಿದ್ದ ವಿನೋದ್ ಮರುದಿನ ಸೂರ್ಯ ಹುಟ್ಟಿದರೂ ಬಾರದ ವಿನೋದ್ ಗಾಗಿ ಪತ್ನಿ ಹುಡಿಕಿದ್ದಾರೆ. ಸ್ನೇಹಿತರು, ಸಂಬಂಧಿಗಳು, ಅಕ್ಕಪಕ್ಕದ ಗ್ರಾಮಗಳಿಗೂ ಕರೆ ಮಾಡಿದರೂ ವಿನೋದ್ ಪತ್ತೆಯಾಗಲಿಲ್ಲಿ. ಈ ಹಿನ್ನಲೆಯಲ್ಲಿ ಜ್ಯೋತಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
