ಮಳೆ ಹಾನಿಗೊಳಗಾದ ಆರ್ ಎಂ ಎಲ್ ನಗರದ ನಿವಾಸಿಗಳಿಗೆ ಸೂಕ್ತ ಪರಿಹಾರ ನೀಡಿ-ಜಿಲ್ಲಾಧಿಕಾರಿಗಳಿಗೆ ಮನವಿ

ಸುದ್ದಿಲೈವ್. ಕಾಂ/ಶಿವಮೊಗ್ಗ
ಮಳೆಯಿಂದ ಹಾನಿಗೊಳಗಾದ ಆರ್ ಎಂ ಎಲ್ ನಗರದ ನಿವಾಸಿಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ
ಆಗ್ರಹಿಸಿ ಆರ್ ಎಂ ಎಲ್ ನಗರ ನಾಗರೀಕ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು
ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು
ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಿವಾಸಿಗಳು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ,ಶಾಸಕ ಈಶ್ವರಪ್ಪ,ಸಂಸದ ರಾಘವೇಂದ್ರ ವಿರುದ್ದ ಘೋಷಣೆ
ಕೂಗಿದರು. ನಿನ್ನೆಯ ದಿನ ನಗರಕ್ಕೆ ಬಂದಿದ್ದ ಉಸ್ತುವಾರಿ ಸಚಿವರು ಆರ್ ಎಂ ಎಲ್ ನಗರಕ್ಕೆ ಭೇಟಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಳೆಯಿಂದ ಹಾನಿಯಾದರು ಕಾರ್ಪೋರೇಟರ್ ರಾಜು ಸ್ಥಳಕ್ಕೆ ಬಾರದೇ ಬೇಜವಾಬ್ದಾರಿ ತೋರಿದ್ದಾರೆ ಎಂದು ಆರೋಪಿಸಿದರು.
ಆರ್ ಎಂ ಎಲ್. ನಗರದ ನಿವಾಸಿ ಪರ್ವೇಜ್ ಆಲ್ತಾಫ್ ಮಾತನಾಡಿ, ಮಳೆಯಿಂದ ಹಾನಿಯಾಗಿದೆ ಬಂದು ನೋಡಿ ಎಂದು ಕರೆತರಲು ಬಂದ ಜನರ ಮೇಲೆ ಕಾರ್ಪೋರೇಟರ್ ರಾಜು ದೂರು ದಾಖಲಿಸಿದ್ದಾನೆ. ಪೊಲೀಸರು
ಎಫ್ಐಆರ್ ದಾಖಲಿಸಿ ಬಂಧಿಸಿದ್ದಾರೆ.ಮಳೆಹಾನಿ ವೀಕ್ಷಣೆಗೆ ಬಂದಿದ್ದ,ಸಚಿವರು ಬಡಾವಣೆಗೆ
ಬಂದಿಲ್ಲ.ಆದ್ದರಿಂದ ಈ ಕೂಡಲೇ ನಿವಾಸಿಗಳಿಗೆ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.
