ಶಿಕ್ಷಣ

ತುಂಗನಗರ ಶಾಲೆಯ ಕಟ್ಟಡ ದುರಸ್ಥಿ ಕಾರ್ಯಕ್ಕೆ ಜಿಲ್ಲಾಧಿಕಾರಿಗೆ ಮನವಿ

IMG-20220524-WA0003

ಸುದ್ದಿಲೈವ್.ಕಾಂ/ಶಿವಮೊಗ್ಗ

ಮೇ 19 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಮಳೆಯಾಗಿದ್ದರಿಂದ ವಿವಿಧ ಪ್ರದೇಶಗಳು ಮಳೆ ನೀರಿನಿಂದ ಜಲಾವೃತಗೊಂಡ ಪರಿಣಾಮ ತುಂಗನಗರದ ಶಾಲೆಯ ಕಟ್ಟಡ ಹಾನಿಗೊಂಡಿದ್ದು ಇದನ್ನ ಅತಿ ಶೀಘ್ರದಲ್ಲಿಯೇ‌ ದುರಸ್ಥಿ ಕಾರ್ಯ ನಡೆಸಬೇಕೆಂದು ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಜಿಲ್ಲಾಧಿಕಾರಿಗಳಿಗೆ‌ ಮನವಿ ಮಾಡಿದೆ.

ಮಳೆಯ ಸಂದರ್ಭದಲ್ಲಿ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು ಗೋಡೆಗಳು ತಂಡಿ ತೆಗೆದುಕೊಂಡಿದೆ.  ನೆಲದ ಮೇಲೆ ನೀರು ನಿಂತುಕೊಂಡು ಶಿಥಿಲ ಗೊಂಡಿದೆ.  ಶಾಲೆಯ ಮಕ್ಕಳಿಗೆ ಕೂರಲು ಬೆಂಚು, ಮೇಜು ಗಳಿಲ್ಲದೆ ನೆಲದ ಮೇಲೆ ಕುಳಿತುಕೊಳ್ಳಬೇಕಿದೆ. ಶಿಕ್ಷಕರು ಪಾಠ ಪ್ರವಚನ ಮಾಡಲು ಅಡಚಣೆ ಉಂಟಾಗುತ್ತಿದೆ.

ನೆಲದ ಮೇಲೆ ಕೂರುವುದರಿಂದ ಮಕ್ಕಳ ಆರೋಗ್ಯ ಹಾಳಾಗುತ್ತಿದೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವ ಪೀಠೋಪಕರಣಗಳ ಅತ್ಯಂತ ಅವಶ್ಯಕತೆ ಇರುತ್ತದೆ ಹಾಗೂ ಶಾಲೆಯ ಆರ್ ಸಿ ಸಿ ಯ ಮೇಲೆ ಕಬ್ಬಿಣದ ಶೀಟುಗಳನ್ನು ಹಾಕಿ ನೀರು ಸೊರದ ಹಾಗೆ ಕಾಮಗಾರಿಯನ್ನು ಅತಿ ಶೀಘ್ರವಾಗಿ ಮಾಡಿಸುವ ಅವಶ್ಯಕತೆ ಇದೆ.

ಹಾಗೂ ಶಾಲೆಯ ಕಾಂಪೌಂಡ್ ಕಾಮಗಾರಿ ಮಾಡಿದ್ದು ಕಾಂಪೌಂಡ್ ಗೇಟು ಗಳಿಲ್ಲದೆ ಮುಖ್ಯರಸ್ತೆ ಪಕ್ಕದಲ್ಲಿರುವುದರಿಂದ ಮಕ್ಕಳು ರಸ್ತೆಗೆ ಹೋಗುತ್ತಾರೆ ಅತಿ ಹೆಚ್ಚು ವಾಹನ ಸಂಚರಿಸುವುದರಿಂದ ಅಪಘಾತಗಳು ಆಗುವ ಹೆಚ್ಚು ಸಂಭವಗಳಿವೆ ಶಾಲೆಯ ಸಮಯದ ನಂತರ ವಾಹನಗಳು ಶಾಲೆಯ ಆವರಣದಲ್ಲಿ ಸಂಚರಿಸುತ್ತಾರೆ ವಾಹನಗಳು ತಂದು ನಿಲ್ಲಿಸುತ್ತಾರೆ.

ಶಾಲೆಯ ಸುರಕ್ಷತೆಗಾಗಿ ಸ್ವಚ್ಛತೆಗಾಗಿ ಶಾಲೆಗೆ ಎರಡು ಗೇಟುಗಳು ಅತ್ಯಂತ ವಾಗಿ ಅವಶ್ಯಕತೆ ಇದೆ ಆದ್ದರಿಂದ ತಾವುಗಳು ಶಾಲಾ ಮಕ್ಕಳ ಹಿತದೃಷ್ಟಿಯಿಂದ ಆಧುನಿಕ ವಿದ್ಯಾಭ್ಯಾಸಕ್ಕಾಗಿ ಮಕ್ಕಳ ಸುರಕ್ಷತೆಗಾಗಿ ನಮ್ಮ ಶಾಲೆಯ ಸರ್ಕಾರಿ ಉರ್ದು ಹಿರಿಯ ಪ್ರಥಮಿಕ ಶಾಲೆ ತುಂಗಾನಗರಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಭೇಟಿ ನೀಡಿ ಮಕ್ಕಳ ಭವಿಷ್ಯವನ್ನು ರೂಪಿಸಲು ವಿದ್ಯಾವಂತರನ್ನಾಗಿ ಆಧುನಿಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅನುಕೂಲ ಮಾಡಿಕೊಡಬೇಕಾಗಿ ಹೃತ್ಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ,

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button