ತುಂಗ ನದಿಯಲ್ಲಿ ಪತ್ತೆಯಾಗಿದ್ದು ಹಿರಿಯೂರಿನ ಬಾಲಕೃಷ್ಣ

ಸುದ್ದಿಲೈವ್.ಕಾಂ/ಶಿವಮೊಗ್ಗ
ತುಂಗ ನದಿಯಲ್ಲಿ ಓರ್ವ ಯುವಕನ ಮೃತದೇಹ ಪತ್ತೆಯಾಗಿದ್ದು ಆತನನ್ನ ಬಾಲಕೃಷ್ಣ (30) ಎಂದು ಗುರುತಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಾಲಕೃಷ್ಣ ಎಂಬ 30 ವರ್ಷದ ಯುವಕ ರಾಜೀವ್ ಗಾಂಧಿ ಬಡಾವಣೆಯ ಭಾಗದಲ್ಲಿರುವ ತುಂಗ ನದಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.
ನಿನ್ನೆ ಸರಗಳ್ಳರ ಶೋಧ ಕಾರ್ಯದಲ್ಲಿ ಬಾಲಕೃಷ್ಣ ಪತ್ತೆಯಾಗಿದ್ದ!
ನಿನ್ನೆ ರಾತ್ರಿ ಸರಗಳ್ಳತನ ಪ್ರಕರಣದ ವಿಚಾರದಲ್ಲಿ ಈ ವ್ಯಕ್ತಿಎನ್ ಸಿ ಸಿ ಕಚೇರಿಯ ಬಳಿ ಮಲಗಿದ್ದನು. ಕೋಟೆ ಪೊಲೀಸ್ ಇನ್ ಸ್ಪೆಕ್ಟರ್ ಅಪರಿಚಿತನ ಬಗ್ಗೆ ಮಾತನಾಡಿಸಿದ್ದಾರೆ. ಚೈನ್ ಸ್ನ್ಯಾಚಿಂಗ್ ಪ್ರಕರಣದ ವ್ಯಕ್ತಿ ಇರಬಹುದು ಎಂಬ ಅನುಮಾನದಲ್ಲಿ ಆತನ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಆದರೆ ಬಾಲಕೃಷ್ಣ ಎಂದು ಹಿರಿಯೂರಿನಿಂದ ಬಂದಿರುವುದೆಂದೂ ಸಹ ಆತ ಉತ್ತರಿಸಿದ್ದಾನೆ.
ಇದಕ್ಕೆ ಸ್ಪಂಧಿಸಿದ ಪೊಲೀಸ ಇನ್ ಸ್ಪೆಕ್ಟರ್ ಬೆಳಿಗ್ಗೆ ಎದ್ದು ಊರಿಗೆ ಹೋಗುವಂತೆ ಸೂಚಿಸಿದ್ದರು. ಆದರೆ ಬೆಳಿಗ್ಗೆ ನದಿಯ ಬಂಡೆಯ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.
ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಜೀವವಿತ್ತು!
ಬಾಲಕೃಷ್ಣ ನದಿಯ ನೀರಿನಲ್ಲಿ ಮುಳುಗಿದ್ದನ್ನ ಸ್ಥಳೀಯರು ಕಂಡಿದ್ದಾರೆ. ತಕ್ಷಣವೇ ಕೋಟೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಮತ್ತು ಅಂಬ್ಯುಲೆನ್ಸ್ ಬರುವ ವೇಳೆ ಬಾಲಕೃಷ್ಣನಿಗೆ ಜೀವ ಇತ್ತು ಎಂದು ಹೇಳಲಾಗುತ್ತಿದೆ. ಮೆಗ್ಗಾನ್ ಗೆ ಕರೆದುಕೊಂಡು ಹೋಗುವ ವೇಳೆ ಆತ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದ್ದಾನೆ.
ಈ ಬಾಲಕೃಷ್ಣ ಕುಡುಕನಾ?
ಆದರೆ ಹಿರಿಯೂರಿನಲ್ಲಿ ಮನೆಯಲ್ಲಿಯೇ ಚಿನ್ನಾಭರಣ ಕೆಲಸ ಮಾಡಿಕೊಂಡಿದ್ದ ಬಾಲಕೃಷ್ಣ ಅತಿಯಾಗಿ ಕುಡಿಯುತ್ತಿದ್ದನು. ಕುಡಿತದ ನಿಶೆಯಲ್ಲಿ ಮನೆ ಬಿಟ್ಟು ಹೋಗುತ್ತಿದ್ದನು ಎಂದು ಆತನ ಕುಟುಂಬ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದೆ.
