ಮನೋರಂಜನೆ
ಚಾರಣ ಮುಗಿಸಿ ಬಂದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

ಸುದ್ದಿಲೈವ್.ಕಾಂ/ಶಿವಮೊಗ್ಗ
ಇಂದಿನ ಯುವ ಪೀಳಿಗೆಗೆ ಸಾಮಾಜಿಕ ಬದುಕಿನಲ್ಲಿ ಮುನ್ನಡೆಯುವ ಹಾದಿಯನ್ನ ಸಾಹಸ ಪ್ರವಾಸಗಳ ಮೂಲಕ ತನ್ನದೇ ಆದ ಅತ್ಯಂತ ವ್ಯವಸ್ಥಿತವಾದ ರೀತಿಯಲ್ಲಿ ಚಾರಣಗಳನ್ನ ಆಯೋಜಿಸುತ್ತಿರುವ ಯೂತ್,,, ಹಾಸ್ಟೆಲ್ ಅಸೋಸಿಯೇಷನ್ ಶಿವಮೊಗ್ಗ ಡಿಸ್ಟಿಕ್ ಯೂನಿಟ್ ಮತ್ತು ತರುಣೋದಯ ಘಟಕವು 53 ಮಕ್ಕಳಿಗೆ ಆಯೋಜಿಸಲಾಗಿತ್ತು.
೧೫ ದಿನದ ಹಿಮಾಲಯ ಪ್ರಕೃತಿ ಕಲಿಕಾ ಚಾರಣವು ಯಶಸ್ವಿಯಾಗಿ ಮುಗಿದ ಸುಸಂದರ್ಭದಲ್ಲಿ ಭಾನುವಾರ ಸಂಜೆ ನಗರದ ಜೈಮಾತ ಗ್ರಾಂಡ್ಯೂರ್ ಹೋಟೆಲ್ ನಲ್ಲಿ ಎಲ್ಲಾ ಮಕ್ಕಳಿಗೆ ಅಭಿನಂದನಾ ಸಮಾರಂಭ ಹಾಗೂ ಅನುಭವ ಹಂಚಿಕೆ ಯನ್ನು ಹಮ್ಮಿಕೊಳ್ಳಲಾಗಿತ್ತು.
ಪದಾಧಿಕಾರಿಗಳಾದ ಸುರೇಶ್. ಹರೀಶ್ ಪಂಡಿತ್, ವಿಜಯ್ ಕುಮಾರ್, ಮನ್ಮೋಹನ್ ಪವಾರ್, ಪ್ರಶಾಂತ್ ವಸಿಷ್ಠ ,ಸುನಿಲ್, ಮಹೇಶ್, ಉಮೇಶ್ ಅಕ್ಕಸಾಲಿ,ನವೀನ್ ಜವಳಿ ,ಬದ್ರಿನಾಥ್ ರಾಘವೇಂದ್ರ ,ಹೇಮಂತ್ ಕೆಲ್ಕರ್, ಪೃಥ್ವಿ ಗಿರಿಮಾಜಿ, ದೊರೆ ಚಿನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.
