ಕ್ರೈಂ
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಅರೆಸ್ಟ್
ಮಂಗಳೂರಿಗೆ ತೆರಳಲು ಯತ್ನಿಸುತ್ತಿದ್ದ ಆರೋಪಿ

ಸುದ್ದಿಲೈವ್.ಕಾಂ/ರಿಪ್ಪನ್ ಪೇಟೆ
ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿದ್ದ ಟ್ರಾಕ್ಟರ್ ಕಳ್ಳತನದ ಆರೋಪಿಯನ್ನ ಹೆಡೆಮುರಿ ಕಟ್ಟುವಲ್ಲಿ ರಿಪ್ಪನ್ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಂದು ಬೆಳಿಗ್ಗೆ ಹೊಸನಗರ ಮಾರ್ಗವಾಗಿ ಮಂಗಳೂರಿಗೆ ತೆರಳುತಿದ್ದ ಆರೋಪಿ ಪ್ರತಾಪ್ ನನ್ನು ಪೊಲೀಸರು ಹೊಸನಗರ ಪಟ್ಟಣದಲ್ಲಿ ಹಿಡಿದಿದ್ದಾರೆ.
ಠಾಣೆಯಿಂದ ತಪ್ಪಿಸಿಕೊಂಡ ದಿನದಿಂದ ಆರೋಪಿ ಪ್ರತಾಪ್ ನ ಬೆನ್ನು ಬಿದ್ದಿದ್ದ ಪೊಲೀಸರು ಇಂದು ಹೊಸನಗರ ಮೂಲಕ ಮಂಗಳೂರಿಗೆ ತೆರಳುತ್ತಿರುವ ಖಚಿತ ಮಾಹಿತಿ ಮೇರೆಗೆ ಹೊಸನಗರ ಪಟ್ಟಣದಲ್ಲಿ ಬಂಧಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಡಿವೈಎಸ್ಪಿ ಶಾಂತವೀರ ಹಾಗೂ ಸಿಪಿಐ ಗಿರೀಶ್ ಮಾರ್ಗದರ್ಶನದಲ್ಲಿ ಪಿಎಸ್ ಐ ಶಿವಾನಂದ ಕೋಳಿ ಹಾಗೂ ಸಿಬ್ಬಂದಿಗಳು ಟ್ರಾಕ್ಟರ್ ಕಳ್ಳತನದ ಆರೋಪಿ ಪ್ರತಾಪ್ ನನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
