
ಸುದ್ದಿಲೈವ್.ಕಾಂ/ಶಿವಮೊಗ್ಗ
ತಾಲೂಕಿನ ಮುದುವಾಲಗ್ರಾಮದಲ್ಲಿರುವ ತಿಮ್ಮಪ್ಪ ಸ್ವಾಮಿ ದೇವಾಲಯದಲ್ಲಿರುವ ಹುಂಡಿಯನ್ನ ಒಡೆದು 40 ಸಾವಿರ ರೂ ಕಾಣಿಕೆ ಹಣವನ್ನ ಕದ್ದೊಯ್ದಿರುವ ಘಟನೆ ನಡೆದಿದೆ.
ಮುದುವಾಲದ ತಿಮ್ಮಪ್ಪ ಸ್ವಾಮಿ ದೇವಾಲಯದ ಮುಂಭಾಗದ ಬಾಗಿಲಿನ ಕೀಯನ್ನ ಒಡೆದು ಗರ್ಭಗುಡಿಯ ಮುಂಭಾಗದಲ್ಲಿರುವ 1½ ಅಡಿ ಎತ್ತರದ ನತ್ತು ಒಂದು ಅಡಿ ಅಗಲದ ಸ್ಟೀಲ್ ಕಾಣಿಕೆ ಡಬ್ಬಿಯ ಬೀಗ ಒಡೆದು 40 ಸಾವಿರ ರೂ ಕಾಣಿಕೆ ಹಣವನ್ನ ಕಳುವು ಮಾಡಲಾಗಿದೆ.
ಕಳೆದ 6 ತಿಂಗ ಹಿಂದೆ ದೇವಸ್ಥಾನವನ್ನ ಮರುಸ್ಥಾಪಿಸಲಾಗಿತ್ತು. ಅಂದಿನಿಂದಲೂ ಕಾಣಿಕೆ ಹುಂಡಿ ಒಡೆದಿರಲಿಲ್ಲ. ಮೊನ್ನೆ ಗ್ರಾಮದಲ್ಲಿ ನೂತನವಾಗಿ ಮದುವೆಯಾದ ದಂಪತಿಗಳು ದೇವಸ್ಥಾನಕ್ಕೆ ಬರುವ ಹಿನ್ನಲೆಯಲ್ಲಿ ದೇವಸ್ಥಾನದ ಅರ್ಚಕರು ಬಾಗಿಲು ತೆರೆದು ಪೂಜೆ ಸಲ್ಲಿಸಿದ್ದರು.
ಮರುದಿನ ಬೆಳಿಗ್ಗೆ ಅರ್ಚಕರು ಬಂದು ದೇವಸ್ಥಾನದ ಬಾಗಿಲು ತೆರೆಯಲು ಮುಂದಾದಾಗ ಬಾಗಿಲು ಚಿಲಕವೇ ಇಲ್ಲದ್ದು ಕಂಡುಬಂದಿದೆ. ತಕ್ಷಣವೇ ದೇವಸ್ಥಾನದ ಅದ್ಯಕ್ಷ ಚಂದ್ರಶೇಖರ್ ಗೆ ಕರೆಮಾಡಿ ವಿಷಯತಿಳಿಸಿದ್ದಾರೆ. ಗರ್ಭಗುಡಿ, ದೇವರ ಮೈಮೇಲಿನ ಒಡವೆ ಯಾವುದು ಕಳುವು ಆಗದೆ ಇರುವುದು ತಿಳಿದು ಬಂದಿದೆ.
ಆದರೆ ಗರ್ಭಗುಡಿ ಮುಂಭಾಗದಲ್ಲಿದ್ದ ಕಾಣಿಕೆ ಡಬ್ಬಿಯನ್ನ ಒಡೆದು ಕಾಣಿಕೆ ಹಣವನ್ನ ಕಳವು ಮಾಡಿರುವುದು ತಿಳಿದುಬಂದಿದೆ. ಪ್ರಕರಣ ಕುಂಸಿ ಠಾಣೆಯಲ್ಲಿ ದೂರು ದಾಖಲಾಗಿದೆ.
