ನಾಲ್ಕು ಮಕ್ಕಳಿಗೆ ಜನ್ಮನೀಡಿದ ಮಹಾತಾಯಿ

ಸುದ್ದಿಲೈವ್.ಕಾಂ/ಶಿವಮೊಗ್ಗ
ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ತಾಯಿಯೊಬ್ಬಳು ಜನ್ಮ ನೀಡಿರುವ ಘಟನೆ ಸರ್ಜಿ ಆಸ್ಪತ್ರೆಯಲ್ಲಿ ನಡೆದಿದೆ. ಭದ್ರಾವತಿಯ ಅಲ್ಮಾ ಬಾನು ಎಂಬುವರು 4 ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ 2 ಗಂಡು ಹಾಗೂ 2 ಹೆಣ್ಣು ಮಗುವಿಗೆ ಅಲ್ಕಾ ಜನ್ಮ ನೀಡಿದ್ದಾರೆ. ಭದ್ರಾವತಿ ತಾಲೂಕಿನ ಕಡಸ ಗ್ರಾಮದ ಆರೀಫ್ ಮತ್ತು ಅಲ್ಮಾ ಬಾನು ದಂಪತಿಗೆ ನಾಲ್ಕು ಮಕ್ಕಳು ಜನ್ಮಿಸಿದೆ.
ತಾಯಿ ಜೊತೆಗೆ ನಾಲ್ಕು ಮಕ್ಕಳು ಸಹ ಆರೋಗ್ಯವಾಗಿವೆ ಎಂದು ವೈದ್ಯರಿಂದ ಮಾಹಿತಿ ನೀಡಿದ್ದಾರೆ. ಅವಳಿ,ತ್ರಿವಳಿ ಮತ್ತು ನಾಲ್ಕು ಮಕ್ಕಳಿಗೆ ಜನ್ಮ ನೀಡುವುದು ಅನುವಂಶೀಯದಿಂದ ಬಂದ ಬಳುವಳಿಯಾಗಿದೆ ಎಂದು ಸರ್ಜಿ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.
5.12 ಲಕ್ಷ ಜನರಿಗೆ ಒಬ್ಬರಿಗೆ ಈ ರೀತಿ ನಾಲ್ಕು ಮಕ್ಕಳು ಹುಟ್ಟುವ ಸಾಧ್ಯತೆ ಹೆಚ್ಚು ಎಂದು ಅಲ್ಕಾರಿಗೆ ಹೆರಿಗೆ ಮಾಡಿಸಿದ ಆಸ್ಪತ್ರೆಯ ವೈದ್ಯರಾದ ಡಾ.ಚೇತನಾ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಮಕ್ಕಳ ವೈದ್ಯ ಡಾ.ಅನಿಲ್ ಬಿ. ಕಲ್ಲೇಶ್ ನಾಲ್ಕು ಮಕ್ಕಳನ್ನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿವೆ. 1.1,1.2,1.3 ಮತ್ತು 1.8 ಕೆಜಿ ತೂಕವಿದೆ. ನಾಲ್ಕೂ ಮಕ್ಕಳಿಗೆ ಆರಂಭದಲ್ಲಿ ಉಸಿರಾಟದ ತೊಂದರೆಯಿಂದಾಗಿ ಎರಡು ಮಕ್ಕಳಿಗೆ ಸೀಪ್ಯಾಪ್ ಅಳವಡಿಸಲಾಗಿದೆ. ಇನ್ಬೆರಡು ಮಕ್ಕಳಿಗೆ ಆಕ್ಸಿಜನ್ ಅಳವಡಿಸಲಾಗಿತ್ತು. ನಾಲ್ಕೂ ಮಕ್ಕಳಿಗೆ ಕಾಂಗರೂ ಮದರ್ ಕೇರ್ ಅಳವಡಿಸಲಾಗಿದೆ ಎಂದು ತಿಳಿಸಿದರು.
