ಸ್ಥಳೀಯ ಸುದ್ದಿಗಳು

ಜಿಲ್ಲಾ ಉಸ್ತುವಾರಿ ಸಚಿವರ ನಗರ ರೌಂಡ್ಸ್-ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ‌ಮಾತಿನ ಚಕಮಕಿ!

ಸುದ್ದಿಲೈವ್.ಕಾಂ/ಶಿವಮೊಗ್ಗ

ನೆರೆ ಇಳಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ.

ಮೇ.19 ರಂದು ಸುರಿದ ಮಳೆ ಹಿಂದೆಂದು ಕಂಡರಿಯದಂತೆ ಮಳೆ ಸುರಿದಿದೆ. ಮಳೆಯಿಂದಾಗಿ ಜನ ಅಪಾರ ಸಂಕಷ್ಟಕ್ಕೆ ಎದುರಾಗಿದ್ದಾರೆ. ಆದರೆ ಇಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ..ನಾರಾಯಣ ಗೌಡ ನಗರ ಸಂಚಾರ ಮಾಡಿದ್ದಾರೆ.

ಬಾಪೂಜಿನಗರ, ಹೊಸಮನೆ, ಶರಾವತಿ ನಗರ ಚಾನೆಲ್‌ಏರಿ, ಶಾಂತಮ್ಮನ ಲೇ ಔಟ್ ಮೊದಲಾದ ಬಡಾವಣೆಗಳಿಗೆ ಸಚಿವರು ಭೇಟಿ ನೀಡಿದ್ದಾರೆ. ಈ ಭೇಟಿಯ ಬಗ್ಗೆ ತೀವ್ರ ಆಕ್ಷೇಪ ಕೇಳಿಬರುತ್ತಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ಚಕಾಮಕಿ

ಸಚಿವ ನಾರಾಯಣ ಗೌಡರು ಹೊಳೆಹೊನ್ನೂರು ರಸ್ತೆ ಚಿಕ್ಕಲ್ ನಲ್ಲಿ ಕಾಂಗ್ರೆಸ್ ನ ಪಾಲಿಕೆಯ ಸದಸ್ಯರು ಮತ್ತು ಕಾಂಗ್ರೆಸ್ ನ ಕೆಲ ಮುಖಂಡರು ಮನವಿ ನೀಡಿದರು. ಈ ವೇಳೆ ಕಾಂಗ್ರೆಸ್ ನ ರಂಗನಾಥ್ ಮಳೆಯಿಂದ ಉಂಟಾದ ನೆರೆಗೆ ಯಾರೂ ಭೇಟಿ ನೀಡಿಲ್ಲ ಎಂದಾಗ ಚನ್ನಬಸಪ್ಪನವರು ಉಸ್ತುವಾರಿ ಸಚಿವರು ಕರೆದುಕೊಂಡು ಹೋಗಲು ಯತ್ನಿಸಿದಾಗ ಮಾತಿನ ಚಕಾಮಕಿ ನಡೆದಿದೆ.

ಜಿಲ್ಲಾ ಉಸ್ತುವಾರಿ ಭೇಟಿ ಕಾಟಾಚಾರದ ಭೇಟಿ ಎಂದು  ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದೆ. ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಬರ್ತಾ‌ಇಲ್ಲ. ನೀವು ನೋಡಿದರೆ ನೆರೆ ಇಳಿದು ಹೋದ ಮೇಲೆ ಬಂದಿದ್ದೀರಿ. ಸಾರ್ವಜನಿಕರಿಗೆ ಯಾರ ಬಳಿ ತೊಂದರೆ ಹೇಳಿಕೊಳ್ಳಬೇಕೆಂದು ಆಗ್ರಹಿಸಿದರು.

ಗರಂ ಆದ ವಿಪಕ್ಷ ನಾಯಕಿ

ಈ ವೇಳೆ ಸೂಡಾ ಅಧ್ಯಕ್ಷ ನಾಗರಾಜ್ ಮೀಡಿಯಾದವರು ಇದ್ದಾಗ ನೀವು ಮಾತನಾಡುತ್ತೀರಿ. ಮೀಡಿಯಾ ಹೋದ‌ಮೇಲೆ ಸುಮ್ಮನಾಗುತ್ತೀರಿ ಎಂದಾಕ್ಷಣ ಪಾಲಿಕೆ ನಾಯಕಿ ಯಮುನಾರಂಗೇಗೌಡರು ಗರಂ ಆಗಿದ್ದಾರೆ. ಙಗೆ ಹೇಳಲು ನಾಗರಾಜ್ ಯಾರು ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕಿ ಮಾತನಾಡಿ ನಮ್ಮ ಸಮಸ್ಯೆ ಬಗೆಹರಿಸಲು ಬಿಜೆಪಿಗೆ ಮನಸ್ಸಿಲ್ಲ. 2019 ರಲ್ಲಿ ನೆರೆಯಾಗಿದ್ದಾಗ, ಮೊನ್ನೆ ಬಿದ್ದಾಗ ಮಳೆಯ ವೇಳೆಯೂ ಮನೆಮನೆಗೆ ಹೋಗು ಊಟದ ವ್ಯವಸ್ಥೆ,ನೀರು ತೆಗೆಯುವ ವ್ಯವಸ್ಥೆ ಮಾಡಿರುವುದು ಕಾಂಗ್ರೆಸ್ ಪಕ್ಷವೆಂದರು.

ಕಾಂಗ್ರೆಸ್ ರಾಜಕೀಯ ಮಾಡ್ತಿದೆ-ಚನ್ನಬಸಪ್ಪ

ಪಾಲಿಕೆ ಆಡಳಿತ ಪಕ್ಷದ ನಾಯಕ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪನವರು ಮಾತನಾಡಿ, ನೆರೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಾಇದೆ. ಸಂಸದರು, ಮಾಜಿ ಸಚಿವರು ನೆರೆ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಕಾಂಗ್ರೆಸ್ ಮುತ್ತಿಗೆ ಸರಿಯಲ್ಲ ಎಂದಿದ್ದಾರೆ.

ಬಿಜೆಪಿ ಏನೂ ಮಾಡಿಲ್ಲವೆಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಬಿಜೆಪಿ ಕೆಲಸ ಮಾಡಿದ್ದಕ್ಕೆ ಇಷ್ಟಾದರೂ ಇದೆ ಎಂದು ಚನ್ನಬಸಪ್ಪ ಎದುರೇಟು ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ಕಾಟಾಚಾರದ ಭೇಟಿ ಅಲ್ಲವೆಂದು ಹೇಳಿದರು.

ಸಂಸದರು ವಾಪಾಸ್ ಕರೆದುಕೊಂಡು ಹೋದರು

ಕಾಂಗ್ರೆಸ್ ಮುತ್ತಿಗೆ ವೇಳೆ ಸಂಸದ ಬಿ.ವೈ.ರಾಘವೇಂದ್ರ ಸಮಾಧಾನ ಪಡಿಸಿ ಜಿಲ್ಲಾ ಉಸ್ತುವಾರಿ ಸಚಿವರನ್ನ ಸ್ಥಳದಿಂದ ಕರೆದುಕೊಂಡು ಹೋದರು. ನಂತರ ಪೊಲೀಸರು ಕಾಂಗ್ರೆಸ್ ನಾಯಕರನ್ನ ಸಮಾಧಾನ ಪಡಿಸಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button