ಕ್ರೈಂ

ಮನೆಗೆ ಮುತ್ತಿಗೆ ಹಾಕಿದ 30 ಜನರ ವಿರುದ್ಧ ಪಾಲಿಕೆ ಸದಸ್ಯರಿಂದ ಎಫ್ಐಆರ್

ಪಾಲಿಕೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್ ಡಿ‌ಪಿ ಐಗೆ ಬಿಟ್ಟುಕೊಡಲು ಒತ್ತಾಯ

ಸುದ್ದಿಲೈವ್.ಕಾಂ/ಶಿವಮೊಗ್ಗ

ಮೊನ್ನೆ ಮಳೆ ಬಿದ್ದಾಗ ವಾರ್ಡ್ ನಂಬರ್ 28 ರ ಪಾಲಿಕೆ ಸದಸ್ಯ ರಾಜು ಯಾನೆ ಕೊಟ್ಟೆ ರಾಜು ಮನೆಗೆ ಮುತ್ತಿಗೆ ಹಾಕಿದ 25 ರಿಂದ 30 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಅನಾರೋಗ್ಯದ ಸಂಬಂಧ ಪಾಲಿಕೆ ಸದಸ್ಯ ಮನೆಯಲ್ಲಿದ್ದಾಗ ಮಧ್ಯಾಹ್ನ ಮೇ.19 ರಂದು 2-30 ರ ಸಮಯದಲ್ಲಿ  25 ಜನ ಬಾಗಿಲು ಬಡಿದಿದ್ದಾರೆ. ಪತ್ನಿ ಬಾಗಿಲುತೆರೆದಾಗ ಎಲ್ಲಿ ನಿನ್ನ ಗಂಡ, ಕುಡಿದು ಮಲಗಿದ್ದಾನೆ, ಆತನಿಗೆ ವಾರ್ಡ್ ಕೆಲಸ ಆಗುವುದಿಲ್ಲ. ಪಾಲಿಕೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್ ಡಿಪಿಐಗೆ ಬಿಟ್ಟುಕೊಡಲು ಹೇಳು ಎಂದು ಗದಿರಿಸುವುದಾಗಿ ದೂರಿನಲ್ಲಿ ರಾಜು ಆರೋಪಿಸಿದ್ದಾರೆ.

ಈ ವೇಳೆ ರಾಜು ಹೊರಗೆ ಬಂದಾಗ‌ ಕುಡಿದು ಮಲಗಿದ್ಯಾ? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ವಾರ್ಡ್ ನಲ್ಲಿ ಮಳೆ‌ನೀರು ಬಂದು ಕೊಚ್ಚಿಕೊಂಡು ಹೋಗಿದೆ. ನೀನು ಗಂಡನನ್ನ ಯಾಕೆ ಇಟ್ಟುಕೊಂಡಿದ್ದೀಯ ಸಾಯಿಸು ಎಂದು ರಾಜು ಪತ್ನಿಗೆ ಆಕ್ರೋಶ ವ್ಯಕ್ತಪಡಿಸಿದ ಉದ್ರಿಕ್ತ ಜನ ಪತ್ನಿಯನ್ನ ಎಳೆದಾಡಿದ್ದಾರೆ. ವೇಲ್ ನ್ನ ಎಳೆದಿದ್ದಾರೆ ಎಂದು ಆರೋಪಿಸಲಾಗಿದೆ.

ಪಾಲಿಕೆ ಸದಸ್ಯನಾಗಿರುವುದು ಹೆಂಡತಿ ಜೊತೆ ಇರಲಾ ಎಂದು ಅವಾಚ್ಯ ಶಬ್ದಗಳಿಂದ ಬೈದ ಉದ್ರಿಕ್ತಗುಂಪು ರಾಜೀನಾಮೆ ನೀಡಿ ಎಸ್ ಡಿ ಪಿ ಐ ಗೆ ಪಾಲಿಕೆ ಸದಸ್ಯತ್ವವನ್ನ ಬಿಟ್ಟುಕೊಂಡು ಎಂದು ಗದರಿಸಿರುವುದಾಗಿ ರಾಜು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button