
ಸುದ್ದಿಲೈವ್.ಕಾಂ/ತೀರ್ಥಹಳ್ಳಿ
ಕಾಸರಗೋಡಿನಿಂದ ರಿಪ್ಪನ್ ಪೇಟೆಗೆ ಹೊರಟಿದ್ದ ಮಾರು ಎಸ್ ಕ್ರಾಸ್ ವಾಹನವೊಂದು ತೀರ್ಥಹಳ್ಳಿಯ ವಾಟೆಮನೆ ಬಳಿ ಪಲ್ಟಿ ಹೊಡೆದಿದ್ದು 24 ವರ್ಷದ ಯುವಕನಿಗೆ ಕಾಲು ಮುರಿದಿರುವ ಘಟನೆ ಮೊನ್ಬೆ ನಡೆದಿದೆ.
ಕಾಸರಗೋಡಿನಿಂದ ರಿಪ್ಪನ್ ಪೇಟೆಯಲ್ಲಿರುವ ತೋಟದ ಮನೆ ನೋಡಿಕೊಂಡು ಬರಲು ಕೆಲ್-60-ಪಿ-6161ಮಾರುತಿ ಎಸ್ ಕ್ರಾಸ್ ವಾಹನದಲ್ಲಿ ಕೆ.ಕುಮಾರ್ ಮೊಮ್ಮಗ ರೋಹನ್ ಮತ್ತು ತಮ್ಮನ ಮಗ ದರ್ಶಂತ್ ನೊಂದಿಗೆ ಹೊರಟು ಬಂದಿದ್ದಾರೆ.
ಕಾರು ಚಲಾಯಿಸುತ್ತಿದ್ದ ದರ್ಶಂತ್ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಪರಿಣಾಮ ತೀರ್ಥಹಳ್ಳಿಯ ವಾಟಮನೆಯ ಬಳಿ ಮರ ಮತ್ತು ಕಂಬಕ್ಕೆ ಗುದ್ದಿ ಪಲ್ಟಿ ಹೊಡೆಸಿದ್ದಾರೆ. ಕಾರು ಸಂಪೂರ್ಣ ನುಜ್ಜುಗುಜ್ಜು ಆಗಿದೆ. ಅಪಘಾತದಲ್ಲಿ ದರ್ಶಂತ್ ಕಾಲಿಗೆ ತೀರ್ವತರನಾದ ಗಾಯವಾಗಿದೆ.
ತಕ್ಷಣವೇ ಸಂಬಂಧಿಕರಾದ ಸಂಗೀತರಿಗೆ ವಿಷಯ ಮುಟ್ಟಿಸಿದ್ದರಿಂದ ಅವರು ಮತ್ತು ಶಾಜಿ ಸ್ಥಳಕ್ಕೆ ಬಂದು ದರ್ಶಂತ್ ನನ್ನ ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಿಗೆ ದಾಖಲಿಸಲಾಗಿದೆ. ಪ್ರಕರಣ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
