ತಾಲ್ಲೂಕು ಸುದ್ದಿ

ಹೊಸನಗರ : ಮತ್ತೆ ತನ್ನ ಅಸ್ತಿತ್ವ ಕಳೆದುಕೊಂಡಿತೆ ಹಿನ್ನೀರ ಪ್ರದೇಶ ಹೊಸನಗರ!!

ಸುದ್ದಿಲೈವ್.ಕಾಂ/ಹೊಸನಗರ

ತನ್ನ ಅಸ್ತಿತ್ವವನ್ನ ಕಳೆದುಕೊಂಡಿತೇ ಹೊಸನಗರ ಎಂಬ ಅನುಮಾನ ಶುರುವಾಗಿದೆ. ಒಂದು ಲೆಕ್ಕದ ಪ್ರಕಾರ ಹೌದು ಎನ್ನಲಾಗುತ್ತಿದೆ. ಹಾಗಾದ್ರೆ ಏನು ಅಂತೀರಾ? ಈ ಸ್ಟೋರಿ ಓದಿ

ರಾಜ್ಯ ಬಹುದೊಡ್ಡ, ಪ್ರತಿಷ್ಠಿತ ತಾಲೂಕುಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಅಭಿವೃದ್ಧಿ ವಿಚಾರದಲ್ಲಿ ತೀರಾ ಕಳಪೆ ಮಟ್ಟದಲ್ಲಿದ್ದು, ಶೈಕ್ಷಣಿಕ ಆರ್ಥಿಕವಾಗಿ ಇನ್ನೂ ಹೇಳಿಕೊಳ್ಳದ ಸ್ಥಿತಿಯಲ್ಲಿ ಇದೆ ಹೆಸರಿಗೆ ಬಹುದೊಡ್ಡ ತಾಲೂಕು, ಮುಳುಗಡೆಯಾದ ನಡುಗಡ್ಡೆಯಲ್ಲಿ ವಾಸಿಸುವ ಇಲ್ಲಿನ ಜನರ ಬದುಕಿನ ಬವಣೆಗಳು ಹೇಳತೀರದು.

ಶಿವಮೊಗ್ಗ ಬಹುತೇಕ ಎಲ್ಲ ತಾಲೂಕುಗಳು ಒಂದಿಲ್ಲೊಂದು ವಿಶೇಷತೆ ವಿಷಯಗಳಿಗೆ ರಾಜ್ಯಕ್ಕೆ ಚಿರಪರಿಚಿತ ಇವೆಲ್ಲದರ ಮದ್ಯೆ ಹೊಸನಗರ ಅಂಥ ತಾಲೂಕ ಇದೆ ಅನ್ನೋದು ಶಿವಮೊಗ್ಗದ ರಾಜಕಾರಣಿಗಳಿಗೆ ಏಕೋ ಅಸಡ್ಡೆ, ಹೌದು ಕ್ಷೇತ್ರವನ್ನ ಹರಿದು ಹಂಚಿ ಒಂದು ಕನಿಷ್ಠ ಮೂಲಭೂತ ಸೌಕರ್ಯಕ್ಕಾಗಿ ಜನ ಇಂದು ಅಂಗಲಾಚಿ ಬೇಡುವ ಸ್ಥಿತಿ ನಿರ್ಮಾಣವಾಗಿದೆ.ಇವೆಲ್ಲದರ ಮದ್ಯೆ,ತಾಲೂಕು ರೈತರ ಹಿತ ಕಾಪಾಡುವ ತಾಲೂಕಿನ ರೈತರ ಜೀವನಾಡಿ,ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನ ಹರಿದು ಹಂಚುವ ಪ್ರಕ್ರಿಯೆಗೆ ಸರ್ಕಾರ ಆದೇಶ ನೀಡಿರುವುದು ತಾಲೂಕಿನ ಎಲ್ಲ ರೈತರ ಕೆಂಗಣ್ಣಿಗೆ ಗುರಿಯಾಗಿದ್ದು,ರೈತರು ಆಕ್ರೋಶವನ್ನ ಹೊರಹಾಕಿದ್ದಾರೆ.

ಹೌದು ಹೊಸನಗರ ತಾಲೂಕು ಎಪಿಎಂಸಿ ಸಮಿತಿಯನ್ನೇ ಕೈಬಿಟ್ಟು ಪಕ್ಕದ ಸಾಗರ ತಾಲ್ಲೂಕು ಎಪಿಎಂಸಿ ಜೊತೆಗೆ ಸಂಯೋಜಿಸಿ ವಿಲೀನ ಪ್ರಕ್ರಿಯೆಗೆ ಆದೇಶ ಹೊರಡಿಸಿ ಹೊಸ ದುಸ್ಸಾಹಾಸಕ್ಕೆ,ಕೈ ಹಾಕಿರೋದು ಹೊಸನಗರದ ರೈತರ ಪಾಲಿಗೆ ವಿಪರ್ಯಾಸಯೇ ಸರಿ..

ತಾಲೂಕು ರೈತರ ಅನುಕೂಲತೆಯ ದೃಷ್ಟಿಯಿಂದ ಪ್ರತಿ ತಾಲೂಕಿಗೊಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಸ್ತಿತ್ವದಲ್ಲಿರುವುದು ಈಗಾಗಲೇ ರೂಡಿಯಲ್ಲಿದ್ದು ಕೇವಲ ಜನ ಸಂಖ್ಯೆ ನೆಪಯೊಡ್ಡಿ ವಿಧಾನ ಸಭಾ ಕ್ಷೇತ್ರವನ್ನ ಕಿತ್ತುಕೊಂಡತೆ ಈಗ ಎಪಿಎಂಸಿ ಸಹ ಯಾವುದೇ ರೈತ ಮುಖಂಡರ ಜೊತೆ ಚರ್ಚಿಸಿದೆ, ಏಕಏಕಿ ನಿರ್ಧಾರ ತಾಲೂಕಿನ ರೈತರ ಭಾವನೆಗಳಿಗೆ ತೀವ್ರ ಘಾಸಿಯಾಗಿರುದ್ದಲ್ಲದೆ, ಆರ್ಥಿಕವಾಗಿ ಇನ್ನಷ್ಟು ಕುಂಠಿತವಾಗುವುದರಲ್ಲಿ ಸಂಶಯವಿಲ್ಲ.!!

ಈಗಾಗಲೇ ಸರ್ಕಾರ ಪ್ರಸ್ತಾವನೆ ಹೊರಡಿಸಿದ್ದು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ,(ನಿಯಂತ್ರಣ &ಅಭಿವೃದ್ಧಿ ) ಅಧಿನಿಯಮ ಅನ್ವಯ ಆಕ್ಷೇಪಣೆಗಳಿಗೆ ಆಹ್ವಾನಿಸಿದ್ದು. ಯಾವುದೇ ಆಕ್ಷೇಪಣೆ, ಸಲಹೆಗಳಿಗೆ 30 ದಿನಗಳ ಒಳಗಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ ಕಾರ್ಯದರ್ಶಿ ಅವರಿಗೆ ಸಲ್ಲಿಸಲು ಅವಕಾಶ ನೀಡಿದ್ದಾರೆ.

ಕೇವಲ ರಾಜಕೀಯವಾಗಿ, ತಮ್ಮ ಚುನಾವಣೆ ಹಿತದೃಷ್ಟಿಯಿಂದ ಯೋಚನೆ ಮಾಡುವ ತಾಲೂಕು ರಾಜಕಾರಣಿಗಳ ಸಂಘಟಿತ ಹೋರಾಟ ಈಗ ಎಷ್ಟರ ಮಟ್ಟಿಗೆ ಕೆಲಸ ಮಾಡಬಲ್ಲದು ಎಂಬುದು ಸಾರ್ವಜನಿಕರ ಅಭಿಪ್ರಾಯ…

ತಾಲೂಕಿನ ರೈತರ ಹಿತ ಕಾಪಾಡಲು,ಉತ್ತಮ ಸಂಘಟಿತ ಹೋರಾಟದ ಪ್ರದರ್ಶನ ಈಗ ಅಗತ್ಯವಾಗಿದೆ, ಈ ಆದೇಶಕ್ಕೆ ತಾರ್ಕಿಕ ಅಂತ್ಯಸಿಗುವುದೋ ಅಥವಾ ಪಕ್ಕದ ಸಾಗರ ತಾಲೂಕು ಜೊತೆಗೆ ಹರಿದು ಹಂಚಿ, ಹೊಸನಗರ ಮತ್ತೊಮ್ಮೆ ಹಿನ್ನೆಲೆ ಸರಿಯುತ್ತೋ ಶರಾವತಿ ಹಿನ್ನೀರಾ ಪ್ರದೇಶ ಹೊಸನಗರ???

ಕಾದು ನೋಡಬೇಕಾಗಿದೆ.ಪ

ವರದಿ :ಅಜಿತ್ ಗೌಡ ಬಡೇನಕೊಪ್ಪ

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button