ಆಸ್ತಿಗಾಗಿ ನಡೆಯಿತಾ ಅಪಹರಣ-ಅಪಹರಣದಲ್ಲಿ ಬಿಜೆಪಿ ಕಾರ್ಯಕರ್ತನ ಹೆಸರು?
ಅಪಹರಣದ ಹಿಂದೆ ಬಿಹೆಪಿ ಕಾರ್ಯಕರ್ತನ ಕೈವಾಡದ ಶಂಕೆ

ಸುದ್ದಿಲೈವ್.ಕಾಂ/ಭದ್ರಾವತಿ
ಜಮೀನು ಮಾರಾಟ ವಿಚಾರದಲ್ಲಿ ಉದ್ಯಮಿಯೋರ್ವನನ್ನ ಕಿಡ್ನ್ಯಾಪ್ ಮಾಡಲಾಗಿದ್ದು ಈ ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತನ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪ್ರಕರಣದಲ್ಲಿ ಚಂದನ್ ನನ್ನ ಬಂಧಿಸಲಾಗಿದೆ. ಇನ್ನು ಇಬ್ಬರು ತಲೆಮರೆಸಿಕೊಂಡಿದ್ದಾರೆ.
ಶಿವಮೊಗ್ಗದ ಜೆಪಿಎನ್ ರಸ್ತೆಯ 2 ನೇ ತಿರುವಿನಲ್ಲಿ ಧನ್ವಂತರಿ ಕ್ಲೀನಿಕ್ ನಡೆಸಿಕೊಂಡು ಹೋಗುತ್ತಿದ್ದ ರಾಜಾರಾಮ್ ಎಂಬ 45 ವರ್ಷದ ವ್ಯಕ್ತಿಯನ್ನ ಅಪಹರಿಸಲಾಗಿದ್ದು ಆತನನ್ನ ಭದ್ರಾವತಿಯ ಜಮೀನಿನ ಶೆಡ್ ಒಂದರಲ್ಲಿ ಕೂಡಿ ಹಾಕಿ ಅಪಹರಣಕ್ಕೊಳಗಾದ ವ್ಯಕ್ತಿಯಿಂದ ಜಮೀನಿನ ಅಗ್ರಿಮೆಂಟ್ ನ್ನ ತಮ್ಮ ಹೆಸರಿಗೆ ಬರೆದುಕೊಡು ಅದರ ಕಮಿಷನ್ ಹಣವನ್ನ ನಾವು ಪಡೆಯುತ್ತೇವೆ ಎಂದು ಬೇಡಿಕೆ ಇಟ್ಟಿದ್ದಾರೆ.
ರಾಜಾರಾಂಗೆ 45 ವರ್ಷ ಕಳೆದರೂ ಮದುವೆಯಾಗಿಲ್ಲ. ಹೋಗಲಿ ಅವರಿಗೆ ಒಡಹುಟ್ಟಿದವರು ಯಾರೂ ಇಲ್ಲ. ಇದನ್ನ ಗಮನಿಸಿದ ಚಂದನ್ ಮತ್ತು ಇತರೆ ಇಬ್ಬರು ಜನ ಶಿವಮೊಗ್ಗದ ಜೆಪಿಎನ್ ರಸ್ತೆಯಲ್ಲಿರುವ ವೈದ್ಯ ನಂದಕಿಶೋರ್ ರವರ ಮೆಡಿಕಲ್ ಶಾಪ್ ಬಳಿ ರಾಜಾರಾಂರನ್ನ ಕಾರೊಂದರಲ್ಲಿ ಅಪಹರಣ ಮಾಡಿದ್ದಾರೆ.
ಕೈಕಾಲು ಕಟ್ಟಿದ ರಾಜಾರಾಂಗೆ ಕಣ್ಷಿಗೆ ಪಟ್ಟಿಕಟ್ಟಿ ಬಾಯಿಗೆ ಬಟ್ಟೆ ತುರುಕಿದ್ದಾರೆ. ನಂತರ ಭದ್ರಾವತಿಯ ಜಮೀನಿನಲ್ಲಿ ಕೂಡಿಹಾಕಿ ಊಟ ತಿಂಡಿ ನೀಡದೆ ಹಿಂಸೆ ನೀಡಿದ್ದಾರೆ. ಜಮೀನಿನ ಹೆಸರು ಬರೆದುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಮೇ.16 ರಂದು ಕಿಡ್ನಾಪ್ ನಡೆದಿದ್ದು ಮೇ.20 ರಂದು ಗ್ರಾಮಸ್ಥರ ಸಹಸಯದಿಂದ ರಾಜಾರಾಂ ಕೂಡಿಹಾಕಿದ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಕೂಡಿಹಾಕಿದ್ದ ಹಳ್ಳಿ ಕಾಳಿಂಗನ ಹಳ್ಳಿ ಎಂದು ಪತ್ತೆಯಾಗಿದೆ. ಕೂಡಿಹಾಕಿದ್ದ ಜಮೀನು ಚಂದ್ರಪ್ಪನವರಿಗೆ ಸೇರಿದ ಜಮೀನು ಎಂದು ತಿಳಿದುಬಂದಿದೆ. ರಾಜಾರಾಂನನ್ನ ಅಪಹರಿಸಿದ ಚಂದನ್ ಬಿಜೆಪಿಯ ಕಾರ್ಯಕರ್ತನಾಗಿದ್ದು ಆತನಿಗೆ ಶಶಿ ಮತ್ತು ಕೊಳಕು ಗೋವಿಂದ ಮತ್ತು ಇನ್ನೊಬ್ಬನು ಸಾತ್ ನೀಡಿದ್ದಾರೆ ಎಂದು ಆರೋಪಿಸಿ ರಾಜಾರಾಂ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇರೆಗೆ ಚಂದನ್ ನನ್ನ ಬಂಧಿಸಲಾಗಿದೆ. ಇನ್ನು ಇಬ್ಬರ ಪತ್ತೆಗೆ ಖಾಕಿ ಪಡೆ ಬಲೆ ಬೀಸಿದೆ.
