
ಸುದ್ದಿಲೈವ್.ಕಾಂ/ಭದ್ರಾವತಿ
ಕೂಲಿ ಕೆಲಸಕ್ಕಾಗಿ ವೆಸ್ಟ್ ಬೆಂಗಾಲ್ ರಾಜ್ಯದಿಂದಬಂದ 19 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಳದ ಯುವತಿಯೋರ್ವಳು ತನ್ನ ತಂದೆ ತಾಯಿಯೊಂದಿಗೆ ಜಾವಳ್ಳಿಯ ಖಾಸಗಿ ಶಾಲೆ ಎದುರಿನ ಲಿಂಡು ಎಂಬುವರ ಅಡಿಕೆ ತೋಟಕ್ಕೆ ಕೂಲಿ ಕೆಲಸಕ್ಕಾಗಿ ಬಂದಿದ್ದಾರೆ.
ಮೊನ್ನೆ ಗುರುವಾರ ಊಟ ಮುಗಿಸಿ ಮಲಗಿದ್ದ ರೇಖಾರಾಣ ಎಂಬ 19 ವರ್ಷದ ಯುವತಿ ಮರು ದಿನ ಸೂರ್ಯೋದಯವಾಗುವ ಹೊತ್ತಿಗೆ ಜಾವಳ್ಳಿಯ ತೋಟದ ಮನೆಯಲ್ಲಿರಲಿಲ್ಲ. ಈ ಬಗ್ಗೆ ಎಲ್ಲಾಕಡೆ ಹುಡುಕಿದ ತಾಯಿ ಪಿರುರಾಣ ನಂತರ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮಗಳು ಮಿಸ್ಸಿಂಗ್ ಆಗಿರುವ ದೂರೊಂದನ್ನ ದಾಖಲಿಸಿದ್ದಾರೆ.
ತಾಯಿ ಪಿರುರಾಣಪ್ರಕಾರ ತೋಟದ ಮನೆಗೆ ಡ್ರೈವರ್ ಆಗಿಕೆಲಸಕ್ಕೆ ಸೇರಿದ್ದ ಶಿವು ಎಂಬ ಯುವಕನ ಜೊತೆ ಈ ರೇಖಾರಾಣ ಹೋಗಿರಬಹುದು ಎಂದು ಶಂಕಿಸಲಾಗಿದೆ. ರೇಖಾರಾಣ ತಾಯಿ ಪಿರುರಾಣ ಮತ್ತು ತಂದೆ ಪಿರುರಾಣ ಜೊತೆ ಪಶ್ಚಿಮ ಬಂಗಾಲ ರಾಜ್ಯದ ಜಾಡುಗ್ರಾಮ್ ಜಿಲ್ಲೆಯ ಮಿಡನ್ ಪೋರು ತಾಲೂಕಿನ ಡಾಯಿನ್ ಗ್ರಾಮದಿಂದ ನಾಲ್ಕು ತಿಂಗಳ ಹಿಂದೆ ಜಾವಳ್ಳಿಗೆ ಬಂದಿದ್ದರು.
