ಕ್ರೈಂ
ಮಾಜಿ ಚುನಾಯಿತ ಪ್ರತಿನಿಧಿಯ ಪತ್ನಿ ಮತ್ತು ಮಗಳು ನಾಪತ್ತೆ!

ಸುದ್ದಿಲೈವ್.ಕಾಂ/ಭದ್ರಾವತಿ
ಚುನಾಯಿತ ಪ್ರತಿನಿಧಿಯೊಬ್ಬರ ಪತ್ನಿ ಮತ್ತು ಮಗಳ ನಾಪತ್ತೆಯಾಗಿರುವ ಘಟನೆಯೊಂದು ನಡೆದಿದ್ದು ಈ ಘಟನೆಗೆ ಕಾರಣವೇನು? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ.
ಅಂತರಗಂಗೆಯ ಮಹೇಂದ್ರ ಟಿ ಎಂಬ ಚುನಾಯಿತ ಪ್ರತಿನಿಧಿಯವರ ಪತ್ನಿ ಸವಿತ ಮತ್ತು ಅವರ ಮಗಳು ಮನೆಯಲ್ಲಿ ಜಗಳವಾಡಿಕೊಂಡು ನಾಪತ್ತೆಯಾಗಿದ್ದಾರೆ.
ಮೇ 9 ರಂದು ಪತ್ನಿ ಮತ್ತು ಮಗಳು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋದವರು ಮರುದಿನ ಮನೆಗೆ ಬಂದಿರುತ್ತಾರೆ. ಈ ವಿಷಯವಾಗಿ ಮಹೇಂದ್ರ ಪತ್ನಿ ಜೊತೆ ಜಗಳವಾಡುತ್ತಾನೆ. ಮಹೇಂದ್ರರವರೊಡನೆ ಜಗಳವಾಡಿದ್ದಾರ ಪರಿಣಾಮ ಮಗಳನ್ನ ಕರೆದುಕೊಂಡು ಸವಿತ ಹೊರಗೆ ನಡೆದಿದ್ದಾರೆ.
ತವರು ಮನೆಗೆತೆರಳಿರಬಹುದು ಎಂದು ತಿಳಿದುಕೊಂಡಿದ್ದ ಮಹೇಂದ್ರ ತವರು ಮನೆಗೆ ಹೋಗದ ಪರಿಣಾಮ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣವೊಂದನ್ನ ದಾಖಲಿಸಿದ್ದಾರೆ. ಮಹೇಂದ್ರ ಮಾಜಿ ಗ್ರಾಮಪಂಚಾಯಿತಿ ಸದಸ್ಯರೆಂದು ತಿಳಿದುಬಂದಿದೆ.
