ಪೆಟ್ರೋಲ್, ಡಿಸೇಲ್ ದರ ಇಳಿಕೆಯಾದ ನಂತರ ಶಿವಮೊಗ್ಗದಲ್ಲಿ ಎಷ್ಟಾಗಿದೆ??
ಪೆಟ್ರೋಲ್ ದರ 9.15 ರೂ.,ಡಿಸೇಲ್ ದರ 6.90 ರೂ ಕಡಿತ

ಸುದ್ದಿಲೈವ್.ಕಾಂ/ಶಿವಮೊಗ್ಗ
ಪೆಟ್ರೋಲ್ ಮತ್ತು ಡಿಸೇಲ್ ಮೇಲೊನ ಅಬಕಾರಿ ಸುಂಕವನ್ನ ಕಡಿತಗೊಳಿಸಿದ ಮೇಲೆ ಶಿವಮೊಗ್ಗದಲ್ಲಿ ಅದರ ಬೆಲೆ ಏನಾಗಿದೆ?
ಹೀಗೆ ಸಾರ್ವಜನಿಕರ ಕುತೂಹಲಕ್ಕೆ ಕಂಪನಿಗಳಾದ ಭರತ್ ಪೆಟ್ರೋಲ್ ಮತ್ತು ಇಂಡಿಯನ್ ಆಯಿಲ್ ಹಾಗೂ ಎಸ್ಸಾರ್ ಸಂಸ್ಥೆಗಳಲ್ಲಿ ಪೈಸೆಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿದೆ.
ಅದರಂತೆ ಸಧ್ಯಕ್ಕೆ ದೊರೆತ ಮಾಹಿತಿ ಪ್ರಕಾರ ಶಿವಮೊಗ್ಗದಲ್ಲಿ ಪೆಟ್ರೋಲ್ ದರ 103.39 ರೂ. ಇದ್ದರೆ, ಡಿಸೇಲ್ ದರ 89.12 ರೂ ಪವರ್ ಪೆಟ್ರೋಲ್ 107.79 ರೂ. ಟರ್ಬೋ ಜೆಟ್ 92.20 ರೂ. ಆಗಿದೆ.
ಪಂಚ ರಾಜ್ಯ ಚುನಾವಣೆಯ 12 ದಿನಗಳ ನಂತರ ಪೆಟ್ರೋಲ್ ದರ 84-85 ಪೈಸೆಗಳು ಮತ್ತು ಡಿಸೇಲ್ ದರ 48 ಪೈಸೆಗಳ ಲೆಕ್ಕಾಚಾರದಲ್ಲಿ ಮೂರು ವಾರಗಳ ವರೆಗೆ ಏರಿಕೆ ಕಂಡು 102 ರೂ.ನಿಂದ 112.54 ರೂ ಗಳವರೆಗೆ ಏರಿಕೆ ಕಂಡಿತ್ತು.
ಈಗ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿದ ನಂತರ ಪೆಟ್ರೋಲ್ ಮತ್ತು ಡಿಸೇಲ್ ದರ ಕಡಿತಗೊಳಿಸಿದ್ದರಿಂದ ಪೆಟ್ರೋಲ್ ದರದಲ್ಲಿ 9.15 ಪೈಸೆ ಕಡಿತಗೊಂಡಿದೆ. 96.02 ರೂ.ದರವಿದ್ದ ಡಿಸೇಲ್ 89.12 ರೂ.ಗೆ ಇಳಿದಿದ್ದು ಇದರಿಂದ 6.90 ರೂ ಇಳಿಕೆಯಾಗಿದೆ.
