
ಸುದ್ದಿಲೈವ್. ಕಾಂ/ಶಿಕಾರಿಪುರ
ಚನ್ನಕೇಶವನಗರದ ಸಿದ್ದಪ್ಪ ಎಂಬ ಶಿಕ್ಷಕರ ಮನೆ ಹಾಗೂ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಕಾರ್ಮಿಕ ವಸಂತ್ ಎಂಬುವರ ಮನೆಗೆ ಕನ್ನಹಾಕಿದ ಆರೋಪಿಯನ್ನ ಬಂಧಿಸುವಲ್ಲಿ ಶಿಕಾರಿಪುರದ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೇ.13ರಂದು ಶಿಕಾರಿಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಕೇಶವ ನಗರದ ಶಿಕ್ಷಕರಾದ ಬಾಪೂಜಿ ಪ್ರೌಢಶಾಲೆಯ ಶಿಕ್ಷಕರಾದ ಸಿದ್ದಪ್ಪ ಎಂಬುವರು ಬೇಸಿಗೆ ರಜೆ ಹಿನ್ಬಲೆಯಲ್ಲಿ ರಟ್ಟೆಹಳ್ಳಿಗೆ ಸಂಸಾರದ ಸಮೇತ ತೆರಳಿದಾಗ ಮನೆಯಲ್ಲಿ ಕಳ್ಳತನವಾಗಿತ್ತು.
ಮನೆಯ ಬೀಗವನ್ನು ಮುರಿದು ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಕಳ್ಳತನವಾಗಿದ್ದ ಪ್ರಕರಣ ಶಿಕಾರಿಪುರ ಟೌನ್ ಠಾಣೆಯಲ್ಲಿ ನಡೆದಿತ್ತು. ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಗಳನ್ನ ಒಳಗೊಂಡ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ಆರೋಪಿತನಾದ ಕಪ್ಪನಹಳ್ಳಿಯ ಯುವರಾಜ, (24) ಈತನನ್ನು ದಸ್ತಗಿರಿ ಮಾಡಲಾಗಿದೆ.
02 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಾಜು ಮೌಲ್ಯ 78,000/- ರೂ.ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ಕಳವಾಗಿತ್ತು ಇದರಲ್ಲಿ ಒಟ್ಟು 7.46 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು 300 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನ ಅಮಾನತ್ತು ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
