ಕ್ರೈಂ

30 ಮೆಟ್ರಿಕ್ ಟನ್ ಅಕೇಶಿಯ ಮತ್ತು ನೀಲಗಿರಿ ಮರಗಳ ಪತ್ತೆ!

ಅಕ್ರಮ ಸಾಗುವಾನಿ ಮತ್ತು ನೀಲಿಗಿರಿ ಮರ ಸಾಗಾಣಿಕೆಗೆ ಯತ್ನ-ಆರೋಪಿ ಬಂಧನ

ಸುದ್ದಿಲೈವ್.ಕಾಂ/ಶಿವಮೊಗ್ಗ

ಸಾಗರ ಪೊಲೀಸರ ಭರ್ಜರಿ ಕಾರ್ಯಾಚರಣೆ ಹಿನ್ನಲೆಯಲ್ಲಿ  ಎಂಪಿಎಂ ನೀಲಗಿರಿ ಮತ್ತು ಅಕೇಶಿಯಾ ಪ್ಲಾಂಟೇಶನ್ ನಿಂದ ಕಳವು ಮಾಡಿದ್ದ 1,50,000 ರೂ. ಮೌಲ್ಯದ 30 ಮೆಟ್ರಿಕ್ ಟನ್ ಅಕೇಶಿಯಾ ಮತ್ತು ನೀಲಗಿರಿ ಮರಗಳನ್ನ ವಶಕ್ಕೆ ಪಡೆದಿದ್ದಾರೆ.

ಎಂಪಿಎಂ ಅರಣ್ಯ ಇಲಾಖೆಗೆ ಸೇರಿದ ನೀಲಗಿರಿ ಹಾಗೂ ಅಕೇಶಿಯ ಪ್ಲಾಂಟೇಶನ್ ನಿಂದ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿ ಸುಮಾರು 1,50,000/- ರೂ ಮೌಲ್ಯದ 30 ಮೆಟ್ರಿಕ್ ಟನ್ ಅಕೇಶಿಯ ಹಾಗೂ ನೀಲಗಿರಿ ಮರದ ತುಂಡುಗಳು, ಹಾಗೂ ಮರದ ತುಂಡುಗಳನ್ನು ಸಾಗಾಣಿಕೆಗೆ ಬಳಸಿದ 02 ಲಾರಿಗಳು, ಮೌಲ್ಯ 52,00,000/- ರೂ ಹಾಗೂ ಕೃತ್ಯಕ್ಕೆ ಬಳಸಿದ 4,00,000/- ರೂ. ಮೌಲ್ಯದ ಮಾರುತಿ ಆಲ್ಟೋ ಕಾರನ್ನು ಅಮಾನತ್ತು ಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 57,50,000/ ಅಮಾನತು ಪಡಿಸಿಕೊಳ್ಳಲಾಗಿದೆ.

ಸಾಗರ ತಾಲೂಕಿನ ಎಂಪಿಎಂ ಸುಳ್ಳಳ್ಳಿ ಘಟಕದ ಸಹಾಯಕ ಅಧ್ಯಕ್ಷ ಪಾಸ್ಕಲ್ ರೋಡ್ರಿಗಸ್ ದೂರಿನ ಮೇರೆಗೆ ಕರೂರು ಹೋಬಳಿ ನಾಡಕಿರುವಾಸ ಗ್ರಾಮದ ಸರ್ವೆ ನಂ 207,185 ರಲ್ಲಿ ಎಂ.ಪಿ.ಎಂ ನಡುತೋಪು ಕರೂರು ಬ್ಲಾಕ್ ನಂ 2008 ಸಂಖ್ಯೆ 240 ಎ ರಲ್ಲಿ 16.40 ಹೆಕ್ಟೇರು ಪ್ರದೇಶದಲ್ಲಿ ಅಕೇಶಿಯ ಹೈಬ್ರಿಡ್ ನೆಡುತೋಪು ಪ್ರದೇಶವಿದ್ದು, ಈ ಪ್ರದೇಶಕ್ಕೆ ಮಂಜುನಾಥ ಎಂಬುವವರನ್ನು ಕಾವಲುಗಾರರಾಗಿ ನೇಮಕ ಮಾಡಲಾಗಿತ್ತು.

ಈ ನಡುತೋಪಿನಲ್ಲಿ ಬೆಳೆದಿದ್ದ ಮರಗಳನ್ನು ಕಟಾವು ಮಾಡಿ ಸಾಗಾಣಿಕೆ ಮಾಡಲು ಗುತ್ತಿಗೆದಾರರಾದ ಅಬ್ದುಲ್ ರೆಹಮಾನ್ ಬೇಗ್ ರವರಿಗೆ ಇಲಾಖೆಯಿಂದ ಗುತ್ತಿಗೆ ನೀಡಲಾಗಿತ್ತು. ಅವರು ಪೆ.7 ರಿಂದ  ಮೇ 9 ರ ವರೆಗೆ ಮರಗಳನ್ನು ಕಟಾವು ಮಾಡಿ ಸಾಗಾಣಿಕೆ ಕೆಲಸ ಮಾಡಿಸಿದ್ದರು. ನಂತರದ ದಿನಗಳಲ್ಲಿ ಮಳಬಂದಿದ್ದರಿಂದ ಕೆಲಸವನ್ನು ನಿಲ್ಲಿಸಿದ್ದರು.

ಮೇ.15 ರಂದು ನಡುತೋಪಿನಲ್ಲಿದ್ದ ಅಕೇಶಿಯ ಮರಗಳನ್ನು ಇಲಾಖೆಯ ಅಧಿಕಾರಿಗಳಿಗೆ ಗೊತ್ತಾಗದಂತೆ ಅಕ್ರಮವಾಗಿ ಅಕೇಶಿಯ ಮರಗಳನ್ನು ಕಟಾವು ಮಾಡಿಸಿ 1,50,000/ ರೂ, ಸುಮಾರು 30 ಮೆಟ್ರಿಕ್ ಟನ್ ಪಲ್ಸ್ ವುಡ್ (ಅಕೇಶಿಯಾ) ಮರಗಳನ್ನು 2 ಲಾರಿಯಲ್ಲಿ ಲೋಡ್ ಮಾಡಿ ಸಾಗಾಣಿಕೆ ಮಾಡಿದ್ದರಿಂದ ಮಂಜುನಾಥನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು  ಕಾರ್ಗಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಎಸ್ಪಿ ಶ್ರೀ ಬಿ.ಎಂ ಲಕ್ಷ್ಮೀ ಪ್ರಸಾದ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ ವಿಕ್ರಂ ಅಮತೆ  ಪ್ರಕರಣ ಪತ್ತೆಹಚ್ಚಲು ಆದೇಶಿಸಿದ ಮೇರೆಗೆ ಸಾಗರದ ಸಹಾಯಕ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಮತ್ತು, ಕಾರ್ಗಲ್ ಸರ್ಕಲ್ ಇನ್ಸ್ ಪೆಕ್ಟರ್ ಕೃಷ್ಣಪ್ಪ ಕೆ.ವಿ ರವರ ಮಾರ್ಗದರ್ಶನದಲ್ಲಿ ತಿರುಮಲೇಶ್ ಪಿಎಸ್‌ಐ ಕಾರ್ಗಲ್ ಠಾಣೆ ರವರ ನೇತೃತ್ವದಲ್ಲಿ ಕಾರ್ಗಲ್ ಪೊಲೀಸ್ ಠಾಣೆಯ ಎಎಸ್‌ಐ ಕರಿಬಸಪ್ಪ, ಸಿಬ್ಬಂದಿಗಳಾದ ಪಿಸಿ 832 ಪುರುಷೋತ್ತಮ, ಪಿಸಿ 1440 ಸುನೀಲ್ ಕುಮಾರ್, ಪಿಸಿ 2056 ಕೊಟ್ರೇಶ, ಮಪಿಸಿ 872 ಶಿಲ್ಪ, ಪಿಸಿ 1304 ಜಗದೀಶ್ ನಾಯ್ಕ, ಪಿಸಿ 11 ಶರತ್ ಕುಮಾರ್, ಪಿಸಿ 768 ಭರತ್ ಕುಮಾರ್, ಪಿಸಿ 1628 ಬಸವರಾಜ್, ಪಿಸಿ 1559 ಕಿರಣಾಚಾರಿ ರವರುಗಳನ್ನು ಒಳಗೊಂಡ ತಂಡ ಆರೋಪಿ ಮಂಜುನಾಥ ಸೆರೆಗೆ ತಂಡ ರಚಿಸಲಾಗಿತ್ತು.

ಆವರಣದಲ್ಲಿದ್ದ ಕಎ 65 1069 ರ ಲಾರಿ ಹಾಗೂ ಕೆಎ 22 ಬಿ 0906 ಲಾರಿಗಳಲ್ಲಿ ತುಂಬಿದ್ದ 14 ಮೆಟ್ರಿಕ್ ಟನ್ ಅಕೇಶಿಯ ಹಾಗೂ 16 ಮೆಟ್ರಿಕ್ ಟನ್ ನೀಲಗಿರಿ ಮರಗಳ ಸಮೇತ ಅಮಾನತ್ತು ಪಡಿಸಿಕೊಂಡಿರುತ್ತದೆ. ಆರೋಪಿ ಮಂಜುನಾಥ್ ನನ್ನ ಬಂಧಿಸಲಾಗಿದೆ.

 

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button