ಶಿಕ್ಷಣ

ಟಿಇಟಿ ಪರೀಕ್ಷೆಯಲ್ಲಿ ಗರ್ಭಿಣಿಯರಿಗೆ ನೆಲಮಹಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶಕೊಡುವಂತೆ ಮನವಿ!

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗದಲ್ಲಿ ನಡೆಯುತ್ತಿರುವ ಟಿಇಟಿ (ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆ) ಪರೀಕ್ಷೆಯಲ್ಲಿ ಗರ್ಭಿಣಿಯರಿಗೆ ನೆಲ ಮಹಡಿಯ ಮೇಲೆ ಕುಳಿತು ಬರೆಯಲು ಅವಕಾಶ ಕೊಡಬೇಕೆಂಬ ಘಟನೆ ನಡೆದಿದೆ.

ನಗರದ ಸವಳಂಗ ರಸ್ತೆಯಲ್ಲಿರುವ ಶಾಲೆಯೊಂದರಲ್ಲಿ ನಡೆದ ಘಟನೆ ಇದಾಗಿದೆ. ಕಾವ್ಯ ಎಂಬ ಮಹಿಳೆ ಈ ಮನವಿ ಮಾಡಿಕೊಂಡಿದ್ದಾರೆ. ಕಾರಣ ಅವರಿಗೆ ಇನ್ನೆರಡು  ದಿನಗಳಲ್ಲಿ ಹೆರೆಗೆ ಆಗಲಿದೆ ಎಂದು ವೈದ್ಯರು ದಿನಾಂಕವನ್ನ ಕೊಟ್ಟಿದ್ದು ಮಹಡಿಯ ಮೇಲೆ ಮೆಟ್ಟಿಲು ಹತ್ತಿಕೊಂಡು ಹೋಗಲು ಕಷ್ಟವಾಗಿದ್ದರಿಂದ ಮಹಿಳೆ ಪರೀಕ್ಷಾ ಕೇಂದ್ರ ಮುಖ್ಯಸ್ಥರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಆದ್ದರಿಂದ ನೆಲಮಹಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದರು. ಆದರೆ ಅವಕಾಶ ನೀಡಲಿಲ್ಲ. ಮಾನವೀಯತೆ ಮೇಲಾದರೂ ಅವಕಾಶ ಕೊಡಬಹುದು ಎಂದು ಪರೀಕ್ಷಾರ್ಥಿಗಳು ಹೇಳಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಮೈನ್ ಮಿಡ್ಲಿಸ್ಕೂಲ್, ಮೇರಿ ಇಮ್ಮೆಕ್ಯುಲೇಟ್, ಮಹಾವೀರ ಶಾಲೆ, ಕಸ್ತೂರ ಬಾ, ಬಸವೇಶ್ವರ, ಆದಿಚುಂಚನಗಿರಿ, ರಾಮಕೃಷ್ಣ, ಸ್ವಾಮಿ ವಿವೇಕಾನಂದ ಶಾಲೆ ಸೇರಿದಂತೆ 15 ಪರೀಕ್ಷಾ ಕೇಂದ್ರದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆಯನ್ನ ಬರೆಯಲು ಅವಕಾಶ ಮಾಡಿಕೊಡಲಾಗಿದೆ.

ಆದರೆ ಸವಳಂಗರ ರಸ್ತೆಯ ಈ ಖಾಸಗಿ ಶಾಲೆಯಲ್ಲಿ ಈ ಘಟನೆ‌ ನಡೆದಿದೆ. ಸ್ಥಳಕ್ಕೆ ಜಿಪಂ ಸಿಇಒ ವೈಶಾಲಿ ಭೇಟಿ ನೀಡಿ ಪರಿಶೀಲಿಸಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button