ಅಂತಿಮ ಬಿಕಾಂ ಪರೀಕ್ಷೆಯಲ್ಲಿ ಎನ್ ಇಎಸ್ ಸಂಸ್ಥೆಯ ಮೇಲುಗೈ

ಸುದ್ದಿಲೈವ್.ಕಾಂ/ಶಿವಮೊಗ್ಗ
ಕುವೆಂಪು ವಿಶ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಬಹುತೇಕ ರ್ಯಾಂಕಿಂಗ್ ಸ್ಥಾನದಲ್ಲಿ ಎನ್ ಇಎಸ್ ಸಂಸ್ಥೆ ಪಡೆದುಕೊಂಡಿದೆ. ಇದರಲ್ಲಿ ಆಚಾರ್ಯ ತುಳಸಿ ಕಾಲೇಜಿನ 5 ಜನ ವಿದ್ಯಾರ್ಥಿಗಳು, 5 ಜನ ಕಮಲಾನೆಹರೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಂಜೆ ಕಾಲೇಜಿನ ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ.
ಡಿಸೆಂಬರ್ ನಲ್ಲಿ ನಡೆದ ಅಂತಿಮ ಬಿಕಾಂ ಪರೀಕ್ಷೆಯಲ್ಲಿ ಬಹುಪಾಲು ರ್ಯಾಂಕಿಂಗ್ ಸ್ಥಾನವನ್ನ ಎನ್ ಇ ಎಸ್ ಶಿಕ್ಷಣ ಸಂಸ್ಥೆ ಪಡೆಯುವ ಮೂಲಕ ಐತಿ ಹಾಸಿಕ ಮೈಲುಗಲ್ಲು ಸಾಧಿಸಿದ್ದಾರೆ.
ಆಚಾರ್ಯ ತುಳಿಸಿ ಕಾಲೇಜಿನ ಮೇಘನ 97.87% ಅಂಕ ಪಡೆದು ಮೊದಲನೇ ಸ್ಥಾನ ಪಡೆದಿದ್ದು, 97.80 ಸ್ಥಾನ ಪಡೆದ ಕಮಲಾ ನೆಹರೂ ಮೆಮೋರಿಯಲ್ ನ್ಯಾಷನಲ್ ಕಾಲೇಜಿನ ಕೌಸಲ್ಯ ಎಸ್.ವಿ ಎರಡನೇ ಸ್ಥಾನ,
ಎನ್ ಇ ಎಸ್ ನ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಡಡೀಸ್ ನ ಸಾಕ್ಷಿ ಕೆ.ಕಠಾರಿಯಾ 97.80% ಅಂಕ ಪಡೆದು ಎರಡನೇ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದಾರೆ. ಕಮಲಾ ನೆಹರೂ ಕಾಲೇಜಿನ ಶಮಿತಾ.ಎ 96.67% ಅಂಕ ಪಡೆದು ಮೂರನೇ ಸ್ಥಾನವನ್ನ,
ನಾಲ್ಕನೇ ಸ್ಥಾನವನ್ನ ಆಚಾರ್ಯ ತುಳಸಿ ಕಾಲೇಜಿನ ಪ್ರಮೋದ್ ಪಡೆದಿದ್ದು, 96.60% ಅಂಕ ಪಡೆದಿದ್ದಾರೆ. ಕಮಲಾ ನೆಹರೂ ಕಾಲೇಜಿನ ಅನಘ ಎಸ್ ಆರ್ 96.60% ಅಂಕ ಪಡೆದು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಕಮಲಾ ನೆಹರೂ ಕಾಲೇಜಿನ ಅಫಸಲ್ ಸುಲ್ತಾನ್ 96.47% ಅಂಕ ಪಡೆದು ಐದನೇ ಸ್ಥಾನ, ಆಚಾರ್ಯ ತುಳಸಿ ನ್ಯಾಷನಲ್ ಸಂಜೆ ಕಾಲೇಜಿನ ರಾಹುಲ್ ಕೆ.ಆರ್ 6 ನೇ ರ್ಯಾಂಕ್ ಪಡೆದಿದ್ದಾರೆ. ಆಚಾರ್ಯ ತುಳಸಿ ಕಾಲೇಜಿನ ಪ್ರಿಯಾಂಕ ಜಿ 96.27% ಅಂಕ ಪಡೆದು 7 ನೇ ಸ್ಥಾನ ಪಡೆದಿದ್ದಾರೆ.
ಕಮಲಾ ನೆಹರೂ ಕಾಲೇಜಿನ ಪಂಕಜಾ ಬಿ.ಪಿ96.13% ಅಂಕ ಪಡೆದು 8 ನೇ ರ್ಯಾಂಕ್ ನ್ನ, 96.07 % ಅಂಕ ಪಡೆದ ನಂದೀಶ್ ಬಿ ಹೊಸಂಗಡಿ 9 ನೇ ರ್ಯಾಂಕ್ ಪಡೆದಿದ್ದಾರೆ. 96% ಅಂಕ ಪಡೆದ ಮೈತ್ರಿ ಜೆ 10 ನೇ ರ್ಯಾಂಕ್ ಪಡೆದಿದ್ದಾರೆ.
6 ನೇ ರ್ಯಾಂಕಿಂಗ್ ಪಡೆದ ರಾಹುಲ್ ಗಮನ ಸೆಳೆದ ವಿದ್ಯಾರ್ಥಿಯಾಗಿದ್ದಾನೆ. ಬೆಳಿಗ್ಗೆ ಕೆಲಸ ಮಾಡಿ ಸಂಜೆ ಬಿಕಾಂ ಪದವಿ ಅಭ್ಯಾಸಿಸಿ ಶ್ರಮ ಪಟ್ಟ ಪರಿಣಾಮ 6 ನೇ ರ್ಯಾಂಕ್ ಪಡೆದಿದ್ದಾರೆ.
