ಆಯನೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳ್ಳತನ
18 ಹೊಲಿಗೆ ಯಂತ್ರ, 1 ಎಂಬ್ರಾಯ್ಡ್ ಯಂತ್ರ, 2 ಓವರ್ ಲೂಪಿಂಗ್ ಯಂತ್ರ ಹಾಗೂ 1 ನೀಟ್ ಮಿಷನ್ 1 ಡಬಲ್ ಹ್ಯಾಂಡ್ ಮಿಷನ್ ಗಳು ಕಳವು

ಸುದ್ದಿಲೈವ್.ಕಾಂ/ಶಿವಮೊಗ್ಗ
ಆಯನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಕೊಠಡಿಯೊಂದರಲ್ಲಿ ಇರಿಸಲಾಗಿದ್ದ ಜೆಒಸಿ ಕೋರ್ಸ್ ಗೆ ಸಂಬಂಧ ಪಟ್ಟ 18 ಹೊಲಿಗೆ ಯಂತ್ರ, 1 ಎಂಬ್ರಾಯ್ಡ್ ಯಂತ್ರ, 2 ಓವರ್ ಲೂಪಿಂಗ್ ಯಂತ್ರ ಹಾಗೂ 1 ನೀಟ್ ಮಿಷನ್ 1 ಡಬಲ್ ಹ್ಯಾಂಡ್ ಮಿಷನ್ ಗಳು ಕಳುವುಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಪ್ಪ ಎಸ್ ಗುಂಡಪಲ್ಲಿ ಎಂಬುವರು ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
1995 ರಿಂದ ಜೆಒಸಿ ಕೋರ್ಸ್ ಗಳನ್ನ ಕಾಲೇಜಿನಲ್ಲಿ ಆರಂಭಿಸಲಾಗಿತ್ತು. 2013-14ನೇ ಸಾಲಿನಲ್ಲಿ ಈ ಕೋರ್ಸ್ ನ್ನ ಕಾರಣಾಂತರದಿಂದ ಸ್ಥಗಿತಗೊಳಿಸಲಾಗಿತ್ತು. ಈ ಕೋರ್ಸ್ ಗೆ ಸಂಬಂಧಪಟ್ಟ ಹೊಲಿಗೆ ಯಂತ್ರ ಸೇರಿದಂತೆಇತರೆ ಉಪಕರಣಗಳನ್ನ ಪ್ರೌಢಶಾಲ ವಿಭಾಗದ ಪಕ್ಕದ ಕೊಠಡಿಯಲ್ಲಿ ಸಂಗ್ರಹಿಸಿ ಬೀಗಹಾಕಲಾಗಿತ್ತು.
2019 ರಲ್ಲಿ ಪ್ರಾಂಶುಪಾಲರಾಗಿ ಚಂದ್ರಪ್ಪ ಎಸ್ ಗುಂಡಪಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ಸ್ವೀಕರಿಸಿದ್ದು, ಅಧಿಕಾರವನ್ನ ಆಗಿನ ಜಗದೀಶ್ ಎಂಬ ಪ್ರಭಾರಿ ಪ್ರಾಂಶುಪಾಲರಿಂದ ಅಧಿಕಾರ ಸ್ವೀಕರಿಸಿದ್ದರು. ಈ ವೇಳೆಯಲ್ಲಿಯೇ ಜೆಒಸಿ ಕೋರ್ಸ್ ನ ಉಪಕರಣಗಳನ್ನ ಸಂಗ್ರಹಿಸಿ ಇಟ್ಟಿದ್ದ ಕೊಠಡಿ ಸುಸ್ಥಿತಿಯಲ್ಲಿರಲಿಲ್ಲವೆಂದು ಪ್ರಾಂಶುಪಾಲ ಗುಂಡಪಲ್ಲಿ ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.
ಮೊನ್ನೆ ಈ ಉಪಕರಣಗಳು ಕಳುವಾಗಿರುವುದಾಗಿ ಉಪಪ್ರಾಂಶುಪಾಲರಾದ ಕುಮಾರ್ ಕೆ ಪ್ರಾಂಶುಪಾಲ ಚಂದ್ರಪ್ಪ ಎಸ್ ಗುಂಡಪಲ್ಲಿಗೆ ಮೊಬೈಲ್ ಕರೆ ಮೂಲಕ ವಿಷಯ ಮುಟ್ಟಿಸಿದ್ದಾರೆ. ಈ ಕೊಠಡಿ ಪ್ರಾಂಶುಪಾಲರ ಕೊಠಡಿಯಿಂದ ದೂರವಿದೆ ಎಂದು ಸಹ ದಾಖಲಿಸಲಾಗಿದೆ.
ಕೊಠಡಿಯ ಸರಳು ಮುರಿದು ಕೊಠಡಿಯಲ್ಲಿದ್ದ 18 ಹೊಲಿಗೆ ಯಂತ್ರ, 1 ಎಂಬ್ರಾಯ್ಡ್ ಯಂತ್ರ, 2 ಓವರ್ ಲೂಪಿಂಗ್ ಯಂತ್ರ ಹಾಗೂ 1 ನೀಟ್ ಮಿಷನ್ 1 ಡಬಲ್ ಹ್ಯಾಂಡ್ ಮಿಷನ್ ಗಳು ಕಳುವುಗಿದೆ. ಕಳುವಾದ ಉಪಕರಣಗಳು ಮತ್ತು ಕಳವು ಮಾಡಿದ ವ್ಯಕ್ತಿಯನ್ನ ಪತ್ತೆಹಚ್ಚಿಕೊಡುವಂತೆ ದೂರಿನಲ್ಲಿ ತಿಳಿಸಲಾಗಿದೆ.
