ಸ್ನೇಹಿತನ ರಿಸೆಪ್ಷನ್ ಮುಗಿಸಿ ಬರುವಾಗ ಎದುರಿನಿಂದ ಬಂದ ಲಾರಿಗೆ ಬೈಕ್ ಡಿಕ್ಕಿ-ಬೈಕ್ ಸವಾರ ಸಾವು!
ಕಲ್ಲಾಪುರದ ತಿರುವಿನ ಬಳಿಯೊಂದು ಹಿಟ್ ಅಂಡ್ ರನ್ ಪ್ರಕರಣ

ಸುದ್ದಿಲೈವ್.ಕಾಂ/ಶಿವಮೊಗ್ಗ
ಭದ್ರಾವತಿ ತಾಲೂಕು ಕಲ್ಲಾಪುರದ ತಿರುವಿನ ಬಳಿಲಾರಿಯೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆದದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರ ಸಾವನ್ನಪ್ಪಿದ್ದಾನೆ. ಲಾರಿ ಚಾಲಕ ಅಪಘಾತಪಡಿಸಿ ನಿಲ್ಲಿಸದೆ ಮುಂದೆ ಚಲಿಸಿದ್ದರಿಂದ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ.
ಭದ್ರಾವತಿ ಮಾರ್ಗವಾಗಿ ಚನ್ನಗಿರಿಗೆ ಸ್ನೇಹಿತನ ಮದುವೆ ರಿಸೆಪ್ಷನ್ ಮುಗಿಸಿ ವಾಪಾಸ್ ಭದ್ರಾವತಿ ಕಡೆಗೆ ಜೋಳದಾಳ್ ಮಾರ್ಗವಾಗಿ KA-17-HH-4949 ಬೈಕ್ ನಲ್ಲಿ ಹೊರಟಿದ್ದ ಆಂಜನೇಯ ಮತ್ತು ಶ್ರೀಕಾಂತ್ ಎಂಬುವರಿಗೆ ಕಲ್ಲಾಪುರದ ತಿರುವಿನ ಬಳಿ ಎದುರಿನಿಂದ ಬಂದ ಲಾರಿಯೊಂದರ ಹಿಂಭಾಗ ಬೈಕ್ ಗೆ ತಗುಲಿದ ಪರಿಣಾಮ ಚಲಿಸುತ್ತಿದ್ದ ಬೈಕ್ ನಿಂದ ಆಂಜನೇಯ ರಸ್ತೆ ಎಡಬದಿಗೆ ಹಾರಿದ್ದಾರೆ.
ಆದರೆ ಹಿಂಬದಿಯ ಸವಾರ ಶ್ರೀಕಾಂತ್ ಬೈಕ್ ಸಮೇತ ಬಿದ್ದ ಪರಿಣಾಮ ಆತನ ತಲೆ ಮತ್ತು ಕೈಕಾಲಿಗೆ ತೀವ್ರವಾದ ಹೊಡೆತ ಬಿದ್ದಿದೆ. ಅಪಘಾತ ಪಡಿಸಿದ ಲಾರಿ ಮುಂದೆ ಸಾಗಿದ್ದು ರಾತ್ರಿ ವೇಳೆ ತಕ್ಷಣಕ್ಕೆ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲು ಯಾರೂ ಸಿಗದಂತೆ ಆಗಿದೆ.
ಚನ್ನಗಿರಿ ಕಡೆಯಿಂದ ಬರುತ್ತಿದ್ದ ಓಮಿನಿಗೆ ಕೈ ಚಾಚಿ ನಿಲ್ಲಿಸಿದ ಆಂಜನೇಯ ಶ್ರೀಕಾಂತ್ ನನ್ನ ಕರೆದುಕೊಂಡು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಭದ್ರಾವತಿಯಲ್ಲಿ ಮೆಗ್ಗಾನ್ ಗೆ ಹೋಗಲು ವೈದ್ಯರು ತಿಳಿಸಿದ್ದು ತಕ್ಷಣವೇ ಅಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ.
ಮೆಗ್ಗಾನ್ ಗೆ ಹೋಗುವ ಮಾರ್ಗ ಮಧ್ಯದಲ್ಲಿ ಶ್ರೀಕಾಂತ್ ಸಾವನ್ನಪ್ಪಿದ್ದಾರೆ. ಇವರಿಗೆ 23 ವರ್ಷ ವಯಸ್ಸಾಗಿದೆ. ನ್ಯಾಮತಿ ನಿವಾಸಿಯಾಗಿದ್ದು ತಮ್ಮಬೈಕ್ ನಲ್ಲಿ ಶಿವಮೊಗ್ಗಕ್ಕೆ ಬಂದು ಆಂಜನೇಯರನ್ನ ಕರೆದುಕೊಂಡು ಭದ್ರಾವತಿ ಮೂಲಕ ಚನ್ನಗಿರಿಗೆ ಮದುವೆ ರಿಸೆಪ್ಷನ್ ಗೆ ತೆರಳಿದ್ದರು. ಬರುವವಾಗಈ ಘಟನೆ ನಡೆದಿದೆ.
