ತಾಲ್ಲೂಕು ಸುದ್ದಿ

ಬಾಕ್ಸ್ ಚರಂಡಿ ಸ್ಲ್ಯಾಬ್ ಗಳು ಹೋಲ್ ಸೇಲ್ ಆಗಿ ಎರಡು ಪೀಸ್ ಆಗಿದ್ದೇಕೆ?

ಸ್ಮಾರ್ಟ್ ಸಿಟಿ ಕಾಮಗಾರಿಯ ಮತ್ತೊಂದು ಮುಖ ಬಯಲು

ಸುದ್ದಿಲೈವ್.ಕಾಂ/ಶಿವಮೊಗ್ಗ

ಸ್ಮಾರ್ಟ್ ಸಿಟಿ ಕಾಮಗಾರಿ ಜನರನ್ನ ರೋಸತ್ತು ಹೋಗುವಂತೆ ಮಾಡಿದೆ. ಏಕರಂದರೆ ಪ್ರವಾಹ ವಾಗದಂತಹ ಸ್ಥಳಗಳಲ್ಲಿ ಪ್ರವಾಹವಾಗುವಂತೆ ಮಾಡಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಸ್ಮಾರ್ಟ್ ಸಿಟಿ ಕಾಮಗಾರಿಯ ಆರಂಭದ ದಿನಗಳಲ್ಲಿ ಸ್ವರ್ಗವನ್ನೇ ಧರೆಗಿಳಿಸಲಾಗುವುದು ಎಂಬ ಭರವಸೆಯನ್ನ ನೀಡಲಾಗಿತ್ತು. ಆದರೆ ಒಂದೇ ಮಳೆಗೆ ಕಾಮಗಾರಿಯ ಹಣೆಬರಹವನ್ನ ಬಟಾಬಯಲು ಮಾಡಿದೆ. ಹಿಂದೆಂದೂ ಕಂಡರಿಯದ ಮಳೆಯಿಂದಾಗಿ ಈ ಕಾಮಗಾರಿ ಹಾಳಾಗದೆ ಇನ್ನೇನು ಎಂಬ ಹೊಸ ವರಸೆಗಳನ್ನ ಜನರ ಮುಂದೆ ಇಡಲಾಗುತ್ತಿದೆ.

ಆದರೆ ಇಲ್ಲಿನ ದೃಶ್ಯವೊಂದು ಈ ಎಲ್ಲಾ ವರೆಸೆಗಳನ್ನ ಬೆಚ್ಚಿಬೀಳಿಸುವಂತೆ ಮಾಡಿದೆ. ಇದು ಯಾವ ಕಾರಣಕ್ಕೆ ಹೀಗೆ ಬಾಕ್ಸ್ ಚರಂಡಿಯ ಸ್ಲ್ಯಾಬ್ ಗಳು ಮುರಿದು ಹೋಗಿವೆ ಗೊತ್ತಿಲ್ಲ. ಅದೂ ಎರಡು ಮೂರು ಬಾಕ್ಸ್ ಚರಂಡಿಯ ಸ್ಲ್ಯಾಬ್ ಗಳು ಮುರಿದು ಬಿದ್ದರೆ ಯಾವುದೋ ವಾಹನವೋ ಅಥವಾ‌ ಕಿಡಿಗೇಡಿಗಳಿಂದ ಈ ಸ್ಲ್ಯಾಬ್ ಗಳು ಮುರಿದುಬಿದ್ದಿದೆ ಎನ್ನಬಹುದಿತ್ತು.

ಆದರೆ ಸ್ಲ್ಯಾಬ್ ಗಳು ಸಾರಾಸಗಟಾಗಿ ಮುರಿದು ಬಿದ್ದಿದೆ. ಈ ರೀತಿ ಹೋಲ್ ಸೇಲ್ ಆಗಿ ಸ್ಲ್ಯಾಬ್ ಗಳು ಮುರಿದುಬಿದ್ದಿರುವ ದೃಶ್ಯಗಳು ಯಾವಕಾರಣಕ್ಕೆ ಎಂಬುದು ಸ್ನಾರ್ಟ್ ಸಿಟಿ ಅಧಿಕಾರಿಗಳೇ‌ಉತ್ತರಿಸಬೇಕು.

ಏಕದರೆ‌ ಸ್ಥಳೀಯರ ಪ್ರಕಾರ ಮಳೆ ಬೀಳುವ ಮೊದಲು ಈ ಸ್ಲ್ಯಾಬ್ ಚೆನ್ನಾಗಿಯೇ ಇದ್ದವು ಎಂಬುದು ಸ್ಥಳೀಯರ ಹೇಳಿಕೆಯಾಗಿದೆ. ಈ ದೃಶ್ಯ ಬಸವನಗುಡಿಯ 6 ನೇ ತಿರುವಿನಲ್ಲಿ ಕಂಡು ಬಂದಿದೆ. ಸ್ಲ್ಯಾಬ್ ಗಳು ಎರಡು ಪೀಸ್ ಆಗಿ ಬಿದ್ದಿರುವುದು ಕಾಮಗಾರಿಯ ಕೈಗನ್ನಡಿಯಂತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಕೊಳ್ಳುತ್ತಾರೋ ಅಥವಾ ಮತ್ತೊಂದು ಸಬೂಬಿಗೆ ಟೊಂಕಕಟ್ಟಿ ನಿಲ್ಲುತ್ತಾರೋ ಕಾದು ನೋಡೋಣ!

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button