ರಾಜ್ಯ

ನೆರೆ ಸಂತ್ರಸ್ತ್ರರಿಗೆ ಹರ್ಷ ಫೌಂಡೇಷನ್ ನಿಂದ ಸಹಾಯ ಹಸ್ತ!

ಸಹೋದರಿ ಅಶ್ವಿನಿ ಚುನಾವಣೆಗೆ ಸ್ಪರ್ಧಿಸಿ ಗೆದ್ದುಬರಲಿ ಎಂದು ಸಂಘಟನೆಯ

ಸುದ್ದಿಲೈವ್.ಕಾಂ/ಶಿವಮೊಗ್ಗ

ಮತ್ತೆ ಹರ್ಷನ ಸಹೋದರಿ ನೊಂದವರಿಗೆ ಸಹಾಯ ಹಸ್ತ ನೀಡಿದ್ದಾರೆ. ಹರ್ಷನ ಚಾರಿಟಬಲ್ ಟ್ರಸ್ಟ್ ನ ವತಿಯಿಂದ ನೆರೆ ಸಂತ್ರಸ್ತ್ರರಿಗೆ ಸಹಾಯ ಹಸ್ತ ನೀಡಲಾಗಿದೆ.

ಹರ್ಷ ನ ಕೊಲೆಯ ನಂತರ‌ಅಸ್ತಿತ್ವಕ್ಕೆ ಬಂದ‌ಹರ್ಷ ಚಾರಿಟಬಲ್ ಟ್ರಸ್ಟ್ ಸಾಮಾಜಿಕ ಕೆಲಸಕ್ಕಾಗಿಯೇ ಹುಟ್ಟು ಹಾಕಲಾಗಿದ್ದು ನ್ಯೂ ಮಂಡ್ಲಿಯಲ್ಲಿ ಸುಮಾರು 90 ಮನೆಗಳಿಗೆ ತೆರಳಿ ಬ್ಲಾಂಕೆಟ್ಸ್,ಬಿಸ್ಕತ್, ಮತ್ತು ಇತರೆ ಅಗತ್ಯ ವಸ್ತುಗಳನ್ನ ಹಂಚಲಾಗಿದೆ.

ಹರ್ಷ ನ ಸಹೋದರಿ ಅಶ್ವಿನಿಯವರಿಂದಲೇ ಈ ಕಾರ್ಯ ನೆರವೇರಿಸಲಾಗಿದೆ. ಅಲ್ಲದೆ ನ್ಯೂ ಮಂಡ್ಲಿಯ ಮಾತಂಗಮ್ಮ ದೇವಸ್ಥಾನದಲ್ಲಿ ನೆರೆ ಹಾವಳಿಗೆ ತುತ್ತಾದವರಿಗೆ ಮಲಗುವ ವ್ಯವಸ್ಥೆಯನ್ನೂ ಅಶ್ವಿನಿ ಅಂಡ್ ಟೀಮ್ ಮಾಡಿದೆ. ಇದರಿಂದ ಅಶ್ವಿನಿಯ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇವೆಲ್ಲಾ ಸೋಷಿಯಲ್ ಮೀಡಿಯಾ ಫೇಸ್ ಬುಕ್ ನಲ್ಲಿ ಸಂಘಟನೆಯೊಂದು ಸಂತೋಷ ವ್ಯಕ್ತಪಡಿಸಿದೆ. . ಸಹೋದರಿ ಅಶ್ವಿನಿಯವರನ್ನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪ್ರೋತ್ಸಾಹ ತುಂಬಿ ಗೆಲ್ಲುವಂತೆ ಮಾಡೋಣವೆಂದು ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಕರೆ ನೀಡಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button