ಕ್ರೈಂ

ರಾಜಾ ಕಾಲುವೆಯಲ್ಲಿ ತೇಲಿ ಬಂತು ಮಗುವಿನ ಮೃತ ದೇಹ!

ಸುದ್ದಿಲೈವ್.ಕಾಂ/ಶಿವಮೊಗ್ಗ

ಆರ್ ಎಂ.ಎಲ್ ನಗರದಲ್ಲಿ ಒಂದು ತಿಂಗಳ ಮದುವೊಂದು ಶವವಾಗಿ ಪತ್ತೆಯಾಗಿದೆ.

ಎಸ್ ಡಿ ಪಿ ಐ ಕಾರ್ಯಕರ್ತರು ನಿನ್ನೆ ಮಳೆಗೆ ಆರ್ ಎಂ ಎಲ್ ನಗರದಲ್ಲಿ ಆದ ನಷ್ಟವನ್ನ ಸರ್ವೆ ಮಾಡಲು ಹೋದಾಗ ಮಹಿಳೆಯೊಬ್ಬರು ಆರ್ ಎಂ.ಎಲ್ ನಗರದಲ್ಲಿ ಮಗುವೊಂದು ತೇಲಿ ಹೋಗಿರುವುದು ತಿಳಿಸಿದ್ದಾರೆ.

ಎಸ್ ಡಿ ಪಿ ಐ ಕಾರ್ಯಕರ್ತರು ಇದನ್ನ ಹುಡುಕಿಕೊಂಡು ಹೋಗಿದ್ದು, ಭರತ್ ಫೌಂಡರಿಯ ರಾಜಾ ಕಾಲುವೆಯಲ್ಲಿ ಮಗುವಿನ ಮೃತದೇಹ ಸಿಲುಕಿಕೊಂಡಿರುವುದು ಕಂಡು ಬಂದಿದೆ. ಈ ಕುರಿತು ಮಾತನಾಡಿದ ಎಸ್ ಡಿ ಪಿ ಐ ಮುಖಂಡ ಸಲೀಂ ಇದು ಗಂಡು ಮಗುವಾಗಿದ್ದು, ಸುಮಾರು ೧ ತಿಂಗಳ ಮಗುವಾಗಿರಬಹುದೆಂದು ಅಂದಾಜಿಸಲಾಗಿದೆ.

ಈ ಬಗ್ಗೆ ದೊಡ್ಡ ಪೇಟೆ ಪೊಲೀಸರಿಗೆ ತಿಳಿಸಲಾಗಿದ್ದು, ಪೊಲೀಸರಿಗೆ ಒಪ್ಪಿಸಲಾಗುತ್ತಿದೆ ಎಂದು ತಿಳಿಸಿದರು. ಈ ಮಗು ಹೇಗೆ ತೇಲಿ ಬಂತು ಮತ್ತು ಮಗುವಿನ ಸಾವಿಗೆ ಕಾರಣಗಳು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button