ನಡುಗಡ್ಡೆಯಲ್ಲಿ ಸಿಲುಕಿದ್ದ 13 ಕುದುರೆಗಳ ರಕ್ಷಣೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ಕಳೆದ ೨ ದಿನಗಳಿಂದ ಸೋಮಿನಕೊಪ್ಪದ ಕೆರೆಯಲ್ಲಿ ಸಿಲುಕಿದ್ದ ೧೩ ಕುದುರೆಗಳನ್ನ ರಕ್ಷಿಸಲಾಗಿದೆ.
ಸೋಮಿನ ಕೊಪ್ಪದ ಕೆರೆಯ ನಡುಗಡ್ಡೆ ಜಾಗದಲ್ಲಿ ೧೩ ಕುದುರೆಗಳು ಸಿಲುಕಿಕೊಂಡಿದ್ದವು. ಮಳೆಯ ನೀರಿನಿಂದ ನೀರು ಹೆಚ್ಚಾದ ಪರಿಣಾಮ ಕುದುರೆಗಳು ಕೆರೆಯಲ್ಲಿ ಸಿಲುಕಿಕೊಂಡಿದ್ದವು. ನಡುಗಡ್ಡೆಯಲ್ಲಿ ಕುದುರೆಗಳು ಸಿಲುಕಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆದರೆ ನಡುಗಡ್ಡೆಗೆ ಹೋಗಿ ಕುದುರೆಗಳನ್ನ ಪಾರುಮಾಡಲು ಸಾಧ್ಯವಾಗದಂತಾಗಿತ್ತು. ಆದರೆ ಇಂದು ಅಗ್ನಿಶಾಮಕ ದಳದವರು ಇಂದು ೧೩ ಕುದುರೆಗಳನ್ನ ರಕ್ಷಿಸಿದ್ದಾರೆ.
ಬೋಟ್ ಬಳಸಿ ಕುದುರೆಗಳನ್ನ ನಡುಗಡ್ಡೆಯಿಂದ ರಕ್ಷಿಸಿಕೊಂಡು ಬರಲಾಯಿತು.
ವಿದ್ಯಾನಗರದಲ್ಲಿ ತಾಯಿ ಮಗುವಿನ ರಕ್ಷಣೆ
ಅದರಂತೆ ವಿದ್ಯಾನಗರದಲ್ಲಿ ನಿನ್ನೆ ರಾತ್ರಿ ಅಧಿಕ ಮಳೆಯಿಂದಾಗಿ ನೀರು ತಗ್ಗುಪ್ರದೇದಲ್ಲಿ ನೀರು ನುಗ್ಗಿದ್ದು, ಅಗ್ನಿಶಾಮಕ ದಳದವರು ತಾಯಿ ಮತ್ತು ಮಗುವೊಂದನ್ನ ರಕ್ಷಸಿದ್ದಾರೆ.
ಮುದ್ದಿನಕೊಪ್ಪದ ಹಳ್ಳದಲ್ಲಿ ಕೊಚ್ಚಿಹೋದ ಹಸುಗಳು
ಮುದ್ದಿನಕೊಪ್ಪದಲ್ಲಿ ಅಧಿಕ ಮಳೆಯಿಂದಾಗಿ ರಸ್ತೆಯ ಮೇಲೆ ಹಳ್ಳದ ನೀರುಹರಿದಿತ್ತು. ಈ ಹಳ್ಳದ ನೀರಿನ ಮೇಲೆ ಹಸುಗಳು ಬರುತ್ತಿದ್ದಂತೆ ಕೊಚ್ಚಿಕೊಂಡು ಹೋಗಿತ್ತು. ನಾಲ್ಕು ಹಸುಗಳು ಕೊಚ್ಚಿಕೊಂಡು ಹೋಗಿರುವ ವಿಡಿಯೋವೊ ಸಹ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿತ್ತು.
