ಅಕಾಲಿಕ ಮಳೆಯಿಂದ ಲಕ್ಷಾಂತರ ಮೌಲ್ಯದ ಬೆಳೆ ಹಾನಿ: ರೈತರ ಜಮೀನುಗಳಿಗೆ ಕೃಷಿ ಅಧಿಕಾರಿಗಳ ಭೇಟಿ
ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ನಷ್ಟ

ಸುದ್ದಿಲೈವ್.ಕಾಂ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಹಾನಿಯಾಗಿದೆ.
ಸಾಗರ ತಾಲ್ಲೂಕಿನ ಸುತ್ತಮುತ್ತಲೂ ಸಹ ಮಳೆಯಿಂದ ರೈತರು ಹಿಂಗಾರಿನಲ್ಲಿ ಬೆಳೆದಿದ್ದಂತಹ ಬೆಳೆಯೂ ಕೂಡ ಸಾಕಷ್ಟು ನಷ್ಟವಾಗಿದ್ದು ಗೌತಮಪುರ ಗ್ರಾಮ ಪಂಚಾಯತಿಯ ಹಿರೇಹರಕ ಗ್ರಾಮದ ಗದಿಗೆಪ್ಪ ಬಿನ್ ಗುತ್ಯಪ್ಪ ಇವರು ಬೆಳೆದಿರುವ ಬೇಸಿಗೆ ಭತ್ತದ ಬೆಳೆ ಹಾನಿಯಾಗಿದ್ದು ಅಂದಾಜು ಐವತ್ತು ಸಾವಿರದಷ್ಟು ನಷ್ಟವಾಗಿದೆ.
ಯಡೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜಪ್ಪ ಬಿನ್ ಜಟ್ಟಪ್ಪ ಎಂಬುವವರ ಜೋಳವು ಸಹ ಕಟಾವಾಗಿದ್ದು ಮಳೆಯಿಂದ ನೆನೆದು ಸಾಕಷ್ಟು ನಷ್ಟವಾಗಿದೆ.
ಬೆಳ್ಳಂಬೆಳಿಗ್ಗೆ ಸ್ಥಳಕ್ಕೆ ಕೃಷಿ ಅಧಿಕಾರಿಗಳ ಭೇಟಿ : ರೈತರು ಬೆಳೆದ ಬೆಳೆಯು ಮಳೆಯಿಂದ ಹಾಳಾಗಿರುವ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಸ್ಪಂದಿಸಿದ ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಹಾಳಾಗಿರುವ ನಷ್ಟದ ಅಂದಾಜನ್ನು ಮನಗಂಡು ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದಾರೆ.
ಸಾಗರದ ಸಹಾಯಕ ಕೃಷಿ ನಿರ್ದೇಶಕರಾದ ಕಾಶಿನಾಥ್ ವೈ ಒಂಟಕರ್.ಅನಂದಪುರದ ಕೃಷಿ ಅಧಿಕಾರಿಗಳಾದ ಬಿ.ಎಲ್ ಶಿವಪ್ರಕಾಶ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಪಿಡಿಒಗಳು ಸ್ಥಳ ಪರಿಶೀಲಿಸಿದ್ದಾರೆ.
