ರಾಜಕೀಯ

ಮಾಜಿ ಮೇಯರ್ ಕೇಬಲ್ ಬಾಬು ಆಪ್ ಪಕ್ಷ ಸೇರ್ಪಡೆ

IMG-20220520-WA0207ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ಮಾಜಿ ಮೇಯರ್ ಆಗಿರುವ ಹಾಗೂ ಜೆ.ಡಿ.ಎಸ್ ಪಕ್ಷದ ಮುಖಂಡರಾಗಿದ್ದ N ಏಳು ಮಲೈ (ಕೇಬಲ್ ಬಾಬು)
ಜೆಡಿಎಸ್ ಪಕ್ಷವನ್ನು ತ್ಯಜಿಸಿ ಎ ಎ ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ನಿನ್ನೆ ದಿವಸ ಬೆಂಗಳೂರಿನ ಸಿಟಿ ಸೆಂಟರ್ ಹಾಲ್ ನಲ್ಲಿ ನಡೆದ ಎಎಪಿ ಪಕ್ಷದ ಕರ್ನಾಟಕ ರಾಜ್ಯ ಪದಾಧಿಕಾರಿಗಳ ಸಭೆ ಕಾರ್ಯಕ್ರಮದ ವೇಳೆ ಎಎಪಿ ಪಕ್ಷದ ಪ್ರಮುಖ ರಾಜ್ಯ ನಾಯಕರದ ಪೃಥ್ವಿರೆಡ್ಡಿ (ರಾಜ್ಯ ಸಂಚಾಲಕರು) ದಿಲೀಪ್ ಪಾಂಡೆ (ದೆಹಲಿ ಮುಖಂಡರು)ಇದರೊಂದಿಗೆ ರಾಜ್ಯ ನಾಯಕರುಗಳದ ದರ್ಶನ್ ಜೈನ್,ವಿಜಯ್ ಶರ್ಮಾ,ರೈತ ಮುಖಂಡರುಗಳಾದ ಕೋಡಿಹಳ್ಳಿ ಚಂದ್ರಶೇಖರ್

ಇವರೊಂದಿಗೆ ಶಿವಮೊಗ್ಗ ಜಿಲ್ಲಾ ಮುಖಂಡರುಗಳಾದ ಡಿ ಆರ್ ಮನೋಹರ್ ಗೌಡ (ಜಿಲ್ಲಾ ಸಂಘಟನಾ ಸಂಚಾಲಕರು)ದಿವಾಕರ್ (ವಕೀಲರು) ಯುವ ಮುಖಂಡರುಗಳಾದ ಕಿರಣ್. ಕೆ ಲಕ್ಷ್ಮೀಶ ಇವರುಗಳ ಸಮ್ಮುಖದಲ್ಲಿ ಹಾಗೂ ಸಭೆಯಲ್ಲಿ ಸೇರಿದ್ದ ಸಾವಿರಾರು ರಾಜ್ಯ ಪದಾಧಿಕಾರಿಗಳ ಎದುರಲ್ಲಿ ಜೆಡಿಎಸ್ ಪಕ್ಷವನ್ನು ತೊರೆದು ಎಎಪಿ ಪಕ್ಷವನ್ನು ಸೇರ್ಪಡೆ ಗೊಂಡರು.

ಇದೇ ಸಂದರ್ಭದಲ್ಲಿ ಎಎಪಿ ಪಕ್ಷ ಸೇರ್ಪಡೆ ಬಗ್ಗೆ ಮಾತನಾಡಿರುವ ಏಳು ಮಲೈ(ಕೇಬಲ್ ಬಾಬು) ಹಿಂದೆ ತಾನು ಇದ್ದ ಪಕ್ಷವನ್ನು ತೊರೆಯಲು ಕಾರಣವನ್ನು ತಿಳಿಸಿದ್ದಾರೆ. ಹಿಂದೆ ತಾನು ಇದ್ದ ಜೆ.ಡಿ.ಎಸ್ ಪಕ್ಷ ನನಗೆ ಇದುವರೆಗೂ ಒಳ್ಳೆ ಸ್ಥಾನಮಾನವನ್ನು ನೀಡಿದ್ದು ತುಂಬ ಗೌರವಯುತವಾಗಿ ನಡೆಸಿಕೊಂಡಿದೆ.

ಆದರೆ ದೆಹಲಿ ಹಾಗೂ ಪಂಜಾಬ್ ನಲ್ಲಿ ಎಎಪಿ ಪಕ್ಷ ಮಾಡುತ್ತಿರುವ ಜನಪರ ಕೆಲಸಗಳನ್ನು ನೋಡಿದಾಗ ಮುಂದಿನ ದಿನಗಳಲ್ಲಿ ನಾವು ರಾಜ್ಯದ ಜನರು ಹಾಗೂ ಜಿಲ್ಲೆಯ ಜನರಿಗೆ ಇನ್ನೂ ಹೆಚ್ಚಿನ ಸೇವೆಯನ್ನು ಒದಗಿಸಬಹುದು ಎನ್ನುವ ಕಾರಣಕ್ಕೆ ನಾನು ಜೆ.ಡಿ.ಎಸ್ ಪಕ್ಷವನ್ನು ತೊರೆದು ಎಎಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button