ದೇಶ

17 ಮನೆ ಹಾನಿ,1 ಸಾವು, ಜಿಲ್ಲೆಯಲ್ಲಿ ಮಳೆಯಿಂದ ಆದ ಅನಾಹುತ-ಸಂಸದರ ಸುದ್ದಿಗೋಷ್ಠಿಯಲ್ಲಿ ಮಾಹಿತಿ

ಮೆಕ್ಜೆಜೋಳಕ್ಕೂ ಪರಿಹಾರ

ಸುದ್ದಿಲೈವ್.ಕಾಂ/ಶಿವಮೊಗ್ಗ

ಕಂಡರಿಯದ ಮಳೆ, ಸಮಸ್ಯೆಯಾಗಿದೆ. ಮೇ. ತಿಂಗಳಲ್ಲಿ 70 ರಿಂದ 75 ಮಿಮಿ ಮಳೆಯಾಗುತ್ತಿತ್ತು ಆದರೆ ಮೇ ತಿಂಗಳಲ್ಲೇ 250 ಮಿಮಿ ಮಳೆಯಾಗಿದೆ ನೆರೆಉಂಟಾಗಿದೆ. 8-10 ವಾರ್ಡ್ ಜಲವೃತ 4000 ಮನೆ ಮುಳುಗಿದೆ. ಸಾಮಾಗ್ರಿಗಳು ನಷ್ಟವುಂಟಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಮನೆಗಳು ಬಿದ್ದಿವೆ. ಈಶ್ವರಪ್ಪ, ಮೇಯರ್ ಸುನೀತಾ‌ಅಣ್ಣಪ್ಪ ನೇತೃತ್ವದಲ್ಲಿ ಸ್ಥಳಪರಿಶೀಲನೆ ನಡೆಸಿದ್ದಾರೆ ಶಿಕಾರಿಪುರ ಮತ್ತು ಸೊರಬದಲ್ಲಿ.ಬೆಳೆ ಹಾನಿ ಯಾಗಿದೆ. 75-80 ಸಾವಿರ ಕ್ವಿಂಟಲ್ ಮೆಕ್ಕೆಜೋಳ, ಹಾನಿಯಾಗಿದೆ 1½ ಸಾವಿರ ಹೆಕ್ಟೇರ್ ಜಮೀನು ನೀರಿನಿಂದ ಜಲಾವೃತಗೊಂಡಿದೆ.

ಇಂದು ಮಧ್ಯಾಹ್ನದ ವರೆಗೆ ರೆಡ್ ಅಲರ್ಟ್ ಇದೆ. ಎಲ್ಲಾ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿದ್ದು ಖಡಕ್ ಸಮಸ್ಯೆಗಳಿಗೆ ತಕ್ಷಣವೇ ಸ್ಪಂಧಿಸಲು ಸೂಚಿಸಲಾಗಿದೆ. ಜಿಲ್ಲೆಗೆ ಆದ ಹಾನಿ ಕುರಿತು ನಿನ್ನೆ ರಾತ್ರಿ 8-30 ಕ್ಕೆ ಬೆಂಗಳೂರಿನಲ್ಲಿ ಸಿಎಂ ಭೇಟಿ ಮಾಡಿ ಮೆಕ್ಕೆ ಜೋಳ ಹಾನಿ, ಹಾಗೂ ಎಪಿಎಂಸಿ ಮಂಡಿ ಗಳಲ್ಲಿ ಒಣಗಿಸಲು ತಂದ ಬೆಳೆಗಳೂ ಸಹ ಫಂಗಸ್ ನಿಂದ ಹಾಳಾಗಿದೆ. ಇದಕ್ಕೆ ಪರಿಹಾರ ನೀಡಬೇಕಿದೆ ಎಂದು ಮನವಿ ನೀಡಿದ್ದೇನೆ ಎಂದರು.

ಶಾಶ್ವತವಾಗಿ ಪರಿಹರಿಸಲು ಕ್ರಮ ಕೈಗೋಳ್ಳಲಾಗಿಲ್ಲ. ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಯಿಂದ ಹಾಳಾಗಿದೆ ಎಂದು ಜನ ತೆಗಳುತ್ತಿದ್ದಾರೆ. ಈ ಬಗ್ಗೆ ಸಭೆ ನಡೆಸಲಾಗುವುದು ಎಂದ ಸಂಸದರು ನಗರದಲ್ಲಿ 9 ಗಂಜಿ ಕೇಂದ್ರ ತೆಗೆಯಲಾಗಿದೆ. ಸ್ಥಳಾಂತರವನ್ನ ಸ್ವಯಂಕೇತವಾಗಿ ಆಗಿದೆ.ನಗರದಲ್ಲಿ 7 ಮನೆ ಬಿದ್ದಿದೆ. ಜಿಲ್ಲೆಯಲ್ಲಿ 17 ಮನೆಗಳು ಬಿದ್ದಿವೆ. ಒಂದು ಸಾವಾಗಿದೆ ಎಂದು ತಿಳಿಸಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button